ಭೀಕರ ಕೊಲೆ: ರೌಡಿ ಬಂಧನ

Kannada News

28-08-2017 425

ಬೆಂಗಳೂರು: ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದರಿಂದ ಆಕ್ರೋಶಗೊಂಡು, ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ರೌಡಿ ವಿನೋದ್ ಅಲಿಯಾಸ್ ಕೋತಿ ಹಾಗೂ ಆತನ ಸಹಚರನೊಬ್ಬನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಕಾಶಿನಗರದಲ್ಲಿ ಕಳೆದ ಶನಿವಾರ ರಾತ್ರಿ ರಾಜ್ಯೋತ್ಸವನಗರದ ಪುನೀತ್ (19)ನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ರೌಡಿ ವಿನೋದ್ ಹಾಗೂ ಆತನ ಸಹಚರರು ಪರಾರಿಯಾಗಿದ್ದರು. ಅವರಲ್ಲಿ ಖಚಿತ ಮಾಹಿತಿ ಆಧರಿಸಿ ವಿನೋದ್ ಮತ್ತವನ ಸಹಚರನೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಸ್ನೇಹಿತರಾಗಿದ್ದ ಪುನೀತ್ ಹಾಗೂ ವಿನೋದ್ ಇಬ್ಬರೂ ಸೇರಿ ನಾಲ್ಕೈದು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಕುಮಾರಸ್ವಾಮಿ ಲೇಔಟ್ ಪೊಲೀಸರು ತಿಂಗಳ ಹಿಂದೆ ವಿನೋದ್‍ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಪುನೀತ್ ಇಲ್ಲಿಯವರೆಗೂ ಪೊಲೀಸರಿಗೆ ಸಿಗದೇ ಓಡಾಡಿಕೊಂಡಿದ್ದ.

ಇಬ್ಬರೂ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬಳನ್ನು ಪ್ರೀತಿಸುತ್ತಿದ್ದು `ಅವಳು ನನ್ನ ಹುಡುಗಿ. ಮರೆತುಬಿಡು' ಎಂದು ವಿನೋದ್ ತಿಂಗಳ ಹಿಂದೆ ಪುನೀತ್‍ ಗೆ ಎಚ್ಚರಿಕೆ ಕೊಟ್ಟಿದ್ದ. ಅದಕ್ಕೆ ರೌಡಿ ವಿನೋದ್  ಒಪ್ಪಿರಲಿಲ್ಲ. ಇದರಿಂದಾಗಿ ಅವರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹತ್ತು ದಿನಗಳ ಹಿಂದಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ  ವಿನೋದ್, ಸಹಚರರ ಜತೆಗೂಡಿ ಪುನೀತ್‍ ನನ್ನು ಕೊಲ್ಲಲು ಸಂಚು ರೂಪಿಸಿ ಆಗಸ್ಟ್ 26ರ ಸಂಜೆ 6ರ ವೇಳೆ, ಕಾಶಿನಗರದಲ್ಲಿನ ಪಾಳು ಬಿದ್ದಿರುವ `ಅಲ್ಪಾ' ಕಾರ್ಖಾನೆ ಬಳಿ ವಿನೋದ್ ಸೇರಿ ಇಬ್ಬರು,  `ಹುಡುಗಿ ವಿಚಾರವಾಗಿ ಮಾತನಾಡಬೇಕು' ಎಂದು ಪುನೀತ್ ನನ್ನು ಕರೆಸಿಕೊಂಡು ಗಲಾಟೆ ತೆಗೆದು ಕೆಳಗೆ ತಳ್ಳಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ರೌಡಿ ಸಹಚರನೊಬ್ಬನ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ