ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

Kannada News

28-08-2017

ಬೆಂಗಳೂರು: 7ನೇ ತರಗತಿ ಓದುತ್ತಿದ್ದ 13 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರವೆಸಗಿದ 35 ವರ್ಷ ವಯಸ್ಸಿನ ಪೋಟೋ ಗ್ರಾಫರ್ ನೊಬ್ಬನನ್ನು ಬಸವೇಶ್ವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂದೆ-ತಾಯಿ ಕೆಲಸಕ್ಕೆ ಹೋಗಿದ್ದು, ಭಾನುವಾರ ಮಧ್ಯಾಹ್ನ 3ರ ವೇಳೆ ಮನೆಯಲ್ಲಿ ಒಂಟಿಯಾಗಿದ್ದ 7ನೇ ತರಗತಿ ಓದುತ್ತಿದ್ದ, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ, ಮಂಜುನಾಥ ನಗರದ, ಶ್ರೀನಿವಾಸ್‍ ನನ್ನು, ಬಸವೇಶ್ವರನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.

ಮೆಜೆಸ್ಟಿಕ್‍ ನ  ಫೋಟೋ ಸ್ಟುಡಿಯೋ ಒಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಗೆ ವಿವಾಹವಾಗಿ ಒಬ್ಬ ಮಗಳಿದ್ದು, ಮಂಜುನಾಥನಗರದ ಮನೆಯ ಬಳಿ ವಾಸಿಸುತ್ತಿದ್ದ ಅಪ್ರಾಪ್ತ ಬಾಲಕಿಯು ಒಂಟಿಯಾಗಿರುವುದನ್ನು ಗಮನಿಸಿ, ಆಕೆಯ ಮನೆಗೆ ನುಗ್ಗಿ ದುಷ್ಕೃತ್ಯ ಎಸಗಿದ್ದಾನೆ. ಕೂಡಲೇ ಬಾಲಕಿ ರಕ್ಷಣೆಗಾಗಿ ಕೂಗಿಕೊಂಡಾಗ, ಅಕ್ಕಪಕ್ಕದವರು ರಕ್ಷಣೆಗೆ ಬಂದ ಕೂಡಲೇ ಆರೋಪಿ ಪರಾರಿಯಾಗಿದ್ದಾನೆ. ಮಂಕಾಗಿದ್ದ ಬಾಲಕಿಯನ್ನು ಕೆಲಸ ಮುಗಿಸಿಕೊಂಡು ಬಂದು ತಾಯಿ ವಿಚಾರಿಸಿದಾಗ ದುಷ್ಕೃತ್ಯವನ್ನು ತಿಳಿಸಿದ್ದು, ಕೂಡಲೇ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಬಸವೇಶ್ವರನಗರ ಪೊಲೀಸರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿ, ಆರೋಪಿ ಶ್ರೀನಿವಾಸ್‍ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ