ಸಿದ್ದರಾಮಯ್ಯ ನವರದು ಕರಪ್ಟ್ ಗವರ್ನಮೆಂಟ್..?

Kannada News

28-08-2017

ಕೊಪ್ಪಳ: ಪ್ರವಾಸ ಕೈಗೊಂಡಿರುವ ಎಚ್.ವಿಶ್ವನಾಥ್ ಕೊಪ್ಪಳದಲ್ಲಿಂದು ಮಾತನಾಡಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಷದ ಕಾರ್ಯಕರ್ತರ ಭೇಟಿ ಮಾಡಲು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ್ದೇನೆ. ನಾನು ಬಹಳ ಸಲ ಕೊಪ್ಪಳಕ್ಕೆ ಕಾಂಗ್ರೆಸ್ ಮಂತ್ರಿಯಾಗಿ ಬಂದಿದ್ದೆ, ಆದರೆ ಬದಲಾದ ರಾಜಕೀಯದಲ್ಲಿ ನಾನು ಜೆ.ಡಿ.ಎಸ್ ಪಕ್ಷದಿಂದ ಬಂದಿದ್ದೇನೆ ಎಂದರು.

ರಾಜ್ಯವನ್ನು ಒಂದು ಬಾರಿ ಸುತ್ತುವ ಆಸೆ ಇದೆ. ಜೆ.ಡಿ.ಎಸ್.ಪಕ್ಷವನ್ನು ಯಾಕೆ ಜನ ಪ್ರಾಂತೀಯ ಪಕ್ಷವಾಗಿ ಸ್ವೀಕರಿಸುತ್ತಿಲ್ಲ ಎನ್ನುವದರ ಬಗ್ಗೆ ಪ್ರವಾಸ ಮಾಡುತ್ತಿದ್ದೇನೆ ಎಂದು ತಿಳಿಸಿದರು. ನಾನು 45 ವರ್ಷಗಳ ಕಾಲ ರಾಷ್ಟ್ರೀಯ ಪಕ್ಷದಲ್ಲಿದ್ದೆ, ಅನಿವಾರ್ಯ ಪರಿಸ್ಥಿತಿಯಲ್ಲಿ ನಾನು ನಮ್ಮ ನಾಯಕರ ನಡವಳಿಕೆಯಿಂದ ಬೇಸತ್ತು ಜೆ.ಡಿ.ಎಸ್.ಸೇರಿದ್ದೇನೆ, ನಾನು ಎಲ್ಲೆ ಇದ್ದರೂ, ನಿಯತ್ತಾಗಿ ಕೆಲಸ ಮಾಡುತ್ತೆನೆ ಎಂದರು.

ದೇಶದಲ್ಲಿ ಕೊಪ್ಪಳ ಜಿಲ್ಲೆ ಅಪೌಷ್ಟಿಕತೆಯಲ್ಲಿ ನಂಬರ್ ಒನ್ ಇದೆ, ಆದರೆ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರಿಗೆ ಇದು ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಪೀಡಿಯಾಟ್ರಿಕ್ ವೈದ್ಯರೇ ಇಲ್ಲ, ವೈದ್ಯರ ಕೊರತೆಯಿಂದ ಮಕ್ಕಳು ಸಾಯುತ್ತಿವೆ, ಸರ್ಕಾರ ಇದೆಯೋ ಎಲ್ಲವೋ ಎಂದು ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಇಡೀ ಉತ್ತರ ಕರ್ನಾಟಕವನ್ಮು ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಕೊಪ್ಪಳ ಸಾಹಿತ್ಯ ಸಮ್ಮೇಳನವನ್ನು ಇಂದಿಗೂ ನೆನೆಯುತ್ತೇನೆ, 25 ವರ್ಷವಾದ್ರೂ ಜನರ ಪ್ರೀತಿ ಇನ್ನು ಉಳದಿದೆ ಎಂದರು.  '371 ಜೆ' ಗಾಗಿ 1956 ರಿಂದಲೂ ಹೋರಾಟ ನಡೆಯುತ್ತು. ವಿಶೇಷ ಬಜೆಟ್ ಹಾಗೂ ಅನುದಾನಕ್ಕಾಗಿ ನೆಹರು ಶಿಪಾರಸ್ಸು ಮಾಡಿದ್ದರು. ಆದರೆ '371 ಜೆ' ಕಲಂ ಆರು ಜಿಲ್ಲೆಗಳಲ್ಲಿ ಸರಿಯಾಗಿ ಟೇಕ್ ಆಫ್ ಆಗಲಿಲ್ಲಾ,  ಕಲಬುರ್ಗಿಯಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ ಅಲ್ಲಿ ಮುಖ್ಯಮಂತ್ರಿಗಳು ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೂ, ಆರು ಜಿಲ್ಲೆಗಳಿಗೆ ಉದ್ಯೋಗವೇ ಸಿಗಲಿಲ್ಲ, ಆರು ಜಿಲ್ಲೆಗಳಿಗೆ '371 ಜೆ' ಸಿಕ್ಕರೂ ಯಾವುದೇ ಉಪಯೋಗವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಯಚೂರಲ್ಲಿ ರಾಹುಲ್ ಗಾಂಧಿಗೆ ಅಭಿನಂದನೆ ಮಾಡಿದರು, ಆದರೆ, ರಾಹುಲ್ ಗಾಂಧಿಯವರು ಮುಖ್ಯಮಂತ್ರಿಗಳನ್ನು '371 ಜೆ' ಕಾಯಿದೆ ಅಡಿ  ಏನ್ ಕೊಟ್ರು ಅಂತಾ ಕೇಳಲಿಲ್ಲಾ, ಒಂದು ದಿನವೂ ಮುಖ್ಯಮಂತ್ರಿಗಳು '371 ಜೆ' ಕಾಯಿದೆ ಬಗ್ಗೆ ಮೀಟಿಂಗ್ ಮಾಡಲಿಲ್ಲ ಎಂದು ಹರಿಹಾಯ್ದರು. ಆರು ಜಿಲ್ಲೆಗಳಲ್ಲಿ ಶೇಕಡಾ 50 ರಷ್ಟು ಆಫೀಸರ್ಸ್ ಇಲ್ಲ, ತಾಲೂಕಿನಲ್ಲಿ ಒಬ್ಬ ಡಾಕ್ಟರ್ ಮಾತ್ರ ಇದ್ದಾರೆ. ಕೊಪ್ಪಳದಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಕೋಟ್ಯಾಂತರ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ ಅವರು, ಸಿದ್ದರಾಮಯ್ಯ ನವರದು ಕರಪ್ಟ್ ಗೌರ್ನಮೆಂಟ್ ಎಂದರು. ಇನ್ನೊಮ್ಮೆ ಎಲ್ಲೂ ನಾನ್ ಕರಪ್ಟ್ ಅಂತಾ ಹೇಳಬೇಡಿ, ಎಲ್ಲರೂ ಬ್ರಷ್ಟಾಚಾರಿಗಳೆ, ಕಾಂಗ್ರೆಸ್ ಬರೀ ಭಾಗ್ಯಗಳ ಅಮಲಿನಲ್ಲಿ ತೇಲ್ತಾಯಿದೆ, ಇನ್ನು ಬಿಜೆಪಿ ಬರೀ ಕೋಮುವಾದದ ಅಮಲಿನಲ್ಲಿ ತೇಲ್ತಾಯಿದೆ ಎಂದರು. ‘ಸಿ ಫೋರ್’ ಸಮೀಕ್ಷೆ ಅನ್ನೋದು ಕಾಂಗ್ರೆಸ್ ಗೌರ್ನಮೆಂಟ್ ಸಮೀಕ್ಷೆ, ಇದೊಂದು ಸರ್ಕಾರದ ಪ್ರಾಯೋಚಿತ ಸಮೀಕ್ಷೆ, ‘ಸಿ ಫೋರ್’ ಸಮೀಕ್ಷೆ ಒಪ್ಪಕೊಳ್ಳೊದಾದ್ರೆ, ನೀವು ನಂಬರ್ ಒನ್ ಕರಪ್ಟ್ ಅಂತಾ ಒಪ್ಪಿಕೊಳ್ಳಿ ಎಂದಿದ್ದಾರೆ. ಇನ್ನು ದಲಿತರ ಮನೆಗೆ ಯಡಿಯೂರಪ್ಪ ಊಟಕ್ಕೆ ಅಹ್ವಾನ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಗಿಮಿಕ್ ಎಂದಿದ್ದು, ನನಗೆ ಯಡಿಯೂರಪ್ಪ ಬಗ್ಗೆ ಅಪಾರ ಅಭಿಮಾನ ಇದೆ, ಆದರೆ ಇಂತಹ ಗಿಮಿಕ್ ನಾನು ಒಪ್ಪಲ್ಲ, ಎಂದರು.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ