ಸಿಎಂ ಹಾಗೂ ಸಚಿವ ಪುತ್ರರಿಗೆ ಟಿಕೇಟ್ ಭಾಗ್ಯ..?

Kannada News

28-08-2017

ಮೈಸೂರು: ಸಿಎಂ ಹಾಗೂ ಸಚಿವರ ಪುತ್ರರಿಗೆ ಟಿಕೇಟ್ ಭಾಗ್ಯ ದೊರೆಯಲಿದೆ ಎಂದು ಹೇಳಲಾಗುತ್ತಿದ್ದು, ಸಿಎಂ ಪುತ್ರ ಡಾ.ಯತೀಂದ್ರ ಹಾಗೂ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್‌ ಅವರನ್ನು, ಮುಂದಿನ ಚುನಾವಣೆಯಲ್ಲಿ ಕಣಕ್ಕಿಸಲು, ಸಿಎಂ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ ಮಹದೇವಪ್ಪ ಸಜ್ಜಾಗಿದ್ದಾರೆ. ಸಿದ್ದರಾಮಯ್ಯ ಪುತ್ರನಿಗೆ ವರುಣ ಕ್ಷೇತ್ರದಿಂದ ಟಿಕೇಟ್, ಮತ್ತು ಮಹದೇವಪ್ಪ ಪುತ್ರನಿಗೆ ಟಿ.ನರಸೀಪುರದಿಂದ ಟಿಕೇಟ್ ನೀಡಲಿದ್ದೂ, ಮಕ್ಕಳ ರಾಜಕೀಯ ಎಂಟ್ರಿಯನ್ನು ಸಚಿವ ಮಹದೇವಪ್ಪ ಖಚಿತ ಪಡಿಸಿದ್ದಾರೆ. ನಾನು ಮತ್ತು ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಕ್ತ ಅವಕಾಶ ಇದೆ, ಆದ್ದರಿಂದ ಈ ಎರಡು ಕ್ಷೇತ್ರದಲ್ಲಿ ಯುವಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದರು. ಸುನಿಲ್ ಹಾಗೂ ಯತೀಂದ್ರ ಕ್ಷೇತ್ರದಲ್ಲಿದ್ದುಕೊಂಡು ಪಕ್ಷ ಸಂಘಟನೆ ಮಾಡಬೇಕಿದೆ ಎಂದು, ನಿನ್ನೆ ಟಿ.ನರಸೀಪುರದದಲ್ಲಿ ನಡೆದ ಸ್ಥಳೀಯ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಈ ಮಾತನ್ನು ಹೇಳಿದ್ದಾರೆ. ಕಾರ್ಯಕರ್ತರ ಸಮ್ಮುಖದಲ್ಲಿ ಮಾತನಾಡಿದ ಸಚಿವ ಹೆಚ್.ಸಿ.ಮಹದೇವಪ್ಪ, ಮಕ್ಕಳಿಗೆ ಟಿಕೆಟ್ ನೀಡುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಅಂತಿಮ ತೀರ್ಮಾನ ಇದೇ ಅಲ್ಲದಿದ್ದರೂ, ಮುಂದೇನಾಗುತ್ತದೋ ಕಾದು ನೋಡಬೇಕಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ