ನಾಯಿ ದಾಳಿಗೆ, ಕುರಿಗಳು ಬಲಿ !

Kannada News

28-08-2017

ಮಂಡ್ಯ: ಮಂಡ್ಯದಲ್ಲಿ, ನಾಯಿಗಳ ದಾಳಿ ಮುಂದುವರೆದಿದ್ದು, ದಾಳಿಗೆ ಮತ್ತೆ ನಾಲ್ಕು ಕುರಿಗಳು ಸಾವನ್ನಪ್ಪಿದ್ದರೆ, ಏಳು ಕುರಿಗಳಿಗೆ ಗಂಭೀರ ಗಾಯಗಳಾಗಿವೆ. ರೈತ ಮಹಿಳೆ ಮಂಜುಳ ಎಂಬುವವರಿಗೆ ಸೇರಿದ ಕುರಿಗಳಾಗಿದ್ದು, ಮಂಡ್ಯ ನಗರದ 35ನೇ ವಾರ್ಡ್‌ನ, ದೇವೇಗೌಡನದೊಡ್ಡಿಯಲ್ಲಿ ಘಟನೆ ನಡೆದಿದೆ. ಕಳೆದ ಆಗಸ್ಟ್ 20ರಂದು ಕೂಡ ದಾಳಿ ನಡೆಸಿ, ಶಂಕರನಗರ ನಿವಾಸಿ ಅಶ್ರಫ್ ಅವರಿಗೆ ಸೇರಿದ ನಾಲ್ಕು ಕುರಿಗಳನ್ನು ಸಾಯಿಸಿದ್ದವು. ಇದೀಗ ಮತ್ತೆ ಕುರಿಗಳ ಮೇಲೆ ದಾಳಿ ನಡೆಸಿವೆ. ದಿನದಿಂದ ದಿನಕ್ಕೆ ನಾಯಿಗಳ ಹಾವಳಿ ಹೆಚ್ವುತ್ತಿದ್ದು, ಮಂಡ್ಯ ನಗರಸಭೆ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲುವಂತೆ ಆಗ್ರಹಿಸಿದ್ದಾರೆ. ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಮಂಡ್ಯ ನಾಯಿ ದಾಳಿಗೆ ಕುರಿಗಳು ಬಲಿ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ