ಶೆಟರ್ ಮುರಿದು ಸರಣಿ ಕಳ್ಳತನ !

Kannada News

28-08-2017

ವಿಜಯಪುರ: ಕಳೆದ ರಾತ್ರಿ ಕಳ್ಳರು ತಮ್ಮ ಕೈಚಳಕ ತೋರಿದ್ದು, 7 ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸಿದ್ದಾರೆ. ವಿಜಯಪುರ ಜಿಲ್ಲೆಯ, ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಕಳ್ಳರು ಈ ದುಷ್ಕೃತ್ಯ ಎಸಗಿದ್ದಾರೆ. ತಾಂಬಾದ, ಪರಮೇಶ್ವರ ಎಲೆಕ್ಟ್ರಿಕಲ್ಸ್, ವೀರಭದ್ರೇಶ್ವರ ಅಗ್ರೋ ಟ್ರೇಡರ್ಸ್, ರಾಜಾರಾಮ ಕಿರಾಣಿ ಶಾಪ್, ಗುಲಾಬ್ ಮೊಬೈಲ್ ಸೆಂಟರ್ ಸೇರಿದಂತೆ ಒಟ್ಟು ಏಳು ಅಂಗಡಿಗಳಿಗೆ ಕನ್ನ ಹಾಕಿದ ಕಳ್ಳರು, ಎಲ್ಲ ಅಂಗಡಿಗಳ ಬೀಗ ಹಾಗೂ ಶೆಟರ್ ಮುರಿದು, ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಮತ್ತು ಹಣ ದೋಚಿದ್ದಾರೆ. ಎಂದಿನಂತೆ ವ್ಯಾಪಾರ ಮುಗಿಸಿ ಅಂಗಡಿಗೆ ಬೀಗ ಹಾಕಿ, ತೆರಳಿದ್ದ ವ್ಯಾಪಾರಿಗಳು. ಬೆಳಗಾಗುವಷ್ಟರಲ್ಲಿ ಅಂಡಿಗಳಲ್ಲಿ ಕಳ್ಳತನ ನಡೆದಿರುವುದು ಆತಂಕ ಮೂಡಿಸಿದೆ. ಪ್ರಕರಣವು ಇಂಡಿ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದು, ಕಳ್ಳರಿಗಾಗಿ, ಪೊಲೀಸರು ಬಲೆ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ