ಮನೆಯ ಮೇಲ್ಛಾವಣಿ ಕುಸಿತ: 3 ಸಾವು !

Kannada News

28-08-2017

ವಿಜಯಪುರ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ, ಹಲವೆಡೆ ಹೆಚ್ಚಿನ ಅನಾಹುತಗಳು ಸಂಭವಿಸಿದ್ದು, ವಿಜಯಪುರದಲ್ಲಿ ಮನೆ ಮೇಲ್ಛಾವಣಿ ಕುಸಿದು ದಂಪತಿ ಮತ್ತು ಮಗು ಸೇರಿದಂತೆ, ಮೂವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ವಿಜಯಪುರ ನಗರದ ಮಠಪತಿ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿದಿದೆ. ಅಶೋಕ ಗೌಡೇಕರ್ (40) ಪತ್ನಿ ಶಶಿಕಲಾ ಗೌಡೇಕರ್ (30 ) ಮತ್ತು ಮಗು ಚಂದ್ರಶೇಖರ (4) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ, ಮೃತದೇಹಗಳನ್ನು ಹೊರತೆಗೆದು. ತೆರವು ಕಾರ್ಯ ಮುಂದುವರೆಸಿದೆ.  ಗಾಂಧೀಚೌಕ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ