ಟೋಯಿಂಗ್ ವಾಹನಕ್ಕೆ ಫೈನ್..?

Kannada News

26-08-2017

ಬೆಂಗಳೂರು: ಹಲಸೂರಿನ ವಾಹನ ನಿಲುಗಡೆಯಿಲ್ಲದ,(ನೋ ಪಾರ್ಕಿಂಗ್) ಪ್ರದೇಶದಲ್ಲಿ ನಿಲ್ಲಿಸಿದ್ದ, ನೋ ಪಾರ್ಕಿಂಗ್ ವಾಹನಗಳನ್ನು ಕೊಂಡೊಯ್ಯವ ಟೋಯಿಂಗ್ ವಾಹನಕ್ಕೆ ಸಂಚಾರ ಪೊಲೀಸರು ದಂಡ ವಿಧಿಸಿ ಸಂಚಾರ ನಿಯಮ ಎಲ್ಲರಿಗೂ ಒಂದೇ ಎನ್ನುವುದನ್ನು ತೋರಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘಿಸಿ ನೋ ಪಾರ್ಕಿಂಗ್ ಜಾಗದಲ್ಲಿ ಟೋಯಿಂಗ್ ವಾಹನವನ್ನು ನಿಲುಗಡೆ ಮಾಡಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯರ ದೂರಿನ ಮೇರೆಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು. ಹಲಸೂರು ಠಾಣೆಯ ಕೂಗಳತೆ ದೂರದಲ್ಲಿರುವ ಖಾಸಗಿ ಶಾಲೆ ಎದುರಿನ ಫುಟ್‍ಪಾತ್ ಮೇಲೆ ಟೋಯಿಂಗ್ ವಾಹನ ನಿಲುಗಡೆ ಮಾಡಲಾಗುತ್ತಿತ್ತು. ಇದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಬಗ್ಗೆ ಸ್ಥಳೀಯರು ಟೋಯಿಂಗ್  ವಾಹನ ಚಾಲಕನ ಗಮನ ಸೆಳೆದಿದ್ದರೂ ಚಾಲಕ ಸ್ಪಂದಿಸುತ್ತಿರಲಿಲ್ಲ.

ಟೋಯಿಂಗ್ ವಾಹನ ನಿಲುಗಡೆಗೆ ಠಾಣೆಯ ಬಳಿಯೇ ಜಾಗವಿದೆ. ಆದರೂ ಚಾಲಕ ವಾಹನವನ್ನು ಫುಟ್‍ ಪಾತ್ ಮೇಲೆ ನಿಲ್ಲಿಸುತ್ತಿದ್ದ. ಈ ಬಗ್ಗೆ ಸ್ಥಳೀಯರು ದೂರಿದ್ದರು, ನಾವು ಸಹ ಚಾಲಕನಿಗೆ ಎಚ್ಚರಿಕೆ ನೀಡಿದ್ದೆವು. ಆದರೂ ಅದೇ ಜಾಗದಲ್ಲಿ ನಿಲ್ಲಿಸುತ್ತಿದ್ದ. ಆದ್ದರಿಂದ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಹಲಸೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಹಲಸೂರು ಸಂಚಾರ ಠಾಣೆ ಪೊಲೀಸರು ತಮ್ಮದೇ ಠಾಣೆಗೆ ಸೇರಿದ ಟೈಗರ್ ವಾಹನಕ್ಕೆ ದಂಡ ವಿಧಿಸಿ ನಿಯಮ ಪಾಲಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ