ಪಿಎಸ್ಐ ಮೇಲೆ ರೌಡಿಗಳ ಹಲ್ಲೆ !

Kannada News

26-08-2017

ಬೆಂಗಳೂರು: ನಗರದಲ್ಲಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಕೊಲೆ ನಡೆಸಲು ಹೋಗುತ್ತಿದ್ದಾಗ ಬೆನ್ನಟ್ಟಿ ಬಂದ ಕಾಡುಗೊಂಡನಹಳ್ಳಿಯ ಶಾಂಪುರ ಬಳಿ ರೌಡಿಗಳ ಗ್ಯಾಂಗ್,  ಸಬ್‍ ಇನ್ಸ್‍ ಪೆಕ್ಟರ್(ಪಿಎಸ್‍ಐ) ನಯಾಜ್ ಅಹಮದ್ ಮೇಲೆ ಹಾಡಹಗಲೇ ರೌಡಿಗಳು ಮಚ್ಚಿನಿಂದ  ಹಲ್ಲೆ ನಡೆಸಿದ್ದಾರೆ.

ತಲೆಗೆ ಗಾಯಗೊಂಡಿರುವ ನಯಾಜ್ ಅಹಮದ್‍ ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಮೂರು ಹೊಲಿಗೆ ಹಾಕಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿರುವ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಂಪುರದ ಬಳಿ, ರೌಡಿ ನದೀಮ್ ಮತ್ತವನ ಗ್ಯಾಂಗ್ ಎದುರಾಳಿ ರೌಡಿ ಉಮರ್ ಕೊಲೆ ಮಾಡಲು ಅಟ್ಟಾಡಿಸಿಕೊಂಡು ಹೋಗುತ್ತಿದ್ದ, ಮಾಹಿತಿ ಆಧರಿಸಿ ಸಾಮಾನ್ಯ ಉಡುಪಿನಲ್ಲಿದ್ದ ನಯಾಜ್ ಅಹಮದ್ ಮೇಲಾಧಿಕಾರಿಗಳಿಗೂ ಮಾಹಿತಿ ನೀಡದೇ ರಿವಲ್ವಾರ್ ಇಲ್ಲದೇ ಏಕಾಎಕಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಗ್ಯಾಂಗ್‍ ಅನ್ನು ಅಟ್ಟಿಸಿಕೊಂಡ ಹೋದ ನಯಾಜ್ ಅಹಮದ್ ಮೇಲೆ ತಿರುಗಿಬಿದ್ದ ನದೀಮ್ ಗ್ಯಾಂಗ್, ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಮಚ್ಚಿನೇಟಿನಿಂದ ನಯಾಜ್ ಅಹಮದ್‍ ಗೆ ತಲೆಗೆ  ಗಾಯಗಳಾಗಿದ್ದು ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಡೀ ಘಟನೆಯು ಸ್ಥಳದಲ್ಲಿ ಹಾಕಿರುವ ಸಿಸಿ ಟಿವಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ಭಯಾನಕವಾಗಿದೆ. ಪ್ರಕರಣ ದಾಖಲಿಸಿರುವ ಕಾಡುಗೊಂಡನಹಳ್ಳಿ ಪೊಲೀಸರು, ರೌಡಿ ಶೀಟರ್ ನದೀಮ್ ಗ್ಯಾಂಗ್‍ ಗಾಗಿ ತೀವ್ರ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ