ಅಪಘಾತದಲ್ಲಿ ಮಾಜಿ ಯೋಧ ಸಾವು !

Kannada News

26-08-2017

ಉತ್ತರ ಕನ್ನಡ: ಬೈಕ್ ಹಾಗೂ ಕಾರ್ ಮಧ್ಯೆ ನಡೆದ ಅಪಘಾತದಲ್ಲಿ ಮಾಜಿ ಸೈನಿಕರೊಬ್ಬರು, ಮೃತಪಟ್ಟಿದ್ದಾರೆ. ಘಟನೆಯು ಉತ್ತರ ಕನ್ನಡ ಜಿಲ್ಲೆಯ ಅರಬೈಲ್ ಘಟ್ಟದಲ್ಲಿ ನಡೆದಿದೆ. ತಾಲ್ಲೂಕಿನ ಅರಬೈಲ್ ಗ್ರಾಮದ ನಿವಾಸಿ ವಿನೋದ್ ಜಿ.ನಾಯ್ಕ (50) ಅಪಘಾತದಲ್ಲಿ ಸಾವನ್ನಪ್ಪಿರುವ, ಮಾಜಿ ಸೈನಿಕರಾಗಿದ್ದಾರೆ. ವಿನೋದ್ ನಾಯ್ಕ ಅರಬೈಲ್ ನಿಂದ ಬೈಕ್ ನಲ್ಲಿ ಯಲ್ಲಾಪುರ ಕಡೆಗೆ ಬರುತ್ತಿರುವಾಗ, ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಿನೋದ್ ನಾಯ್ಕ ಅವರ ತಲೆಗೆ ಗಂಭೀರವಾಗಿ ಪೆಟ್ಟುಬಿದ್ದಿದ್ದು  ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಟಕ ಬರೆಯುವ ಕಲೆಯನ್ನು ಅಳವಡಿಸಿಕೊಂಡಿರುವ ಇವರು ಸುಮಾರು ಹತ್ತಾರು ನಾಟಕಗಳನ್ನು ಬರೆದು, ನಾಟಕಗಳನ್ನು ಆಡಿ ತೋರಿಸಿ ತಾಲ್ಲೂಕಿನ ಎಲ್ಲ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದರು. ಮತ್ತು ತಮ್ಮ ಅಭಿನಯದಿಂದ ರಂಜಿಸುತ್ತಿದ್ದರು. ಆದರೆ ನಾಯ್ಕ ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ