ಯುವತಿ ಅಪಹಣಕ್ಕೆ ಯತ್ನ: ಧರ್ಮದೇಟು !

Kannada News

26-08-2017

ಮಂಡ್ಯ: ಯುವತಿಯೊರ್ವಳ ಅಪಹಣಕ್ಕೆ, ಮೂವರು ಯುವಕರು ಯತ್ನಿಸಿದ್ದೂ, ಇವರನ್ನು ಹಿಡಿದು, ಗ್ರಾಮಸ್ಥರೇ ಧರ್ಮದೇಟು ನೀಡಿ, ಮನಬಂದಂತೆ ಥಳಿಸಿರುವ ಘಟನೆಯು, ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನಾಗಮಂಗಲ ತಾಲ್ಲೂಕು ತೊರೆಮಲ್ಲನಾಯಕನಹಳ್ಳಿಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ರಮೇಶ ,ಬಾಲಾಜಿ, ಗುರು ಅಪಹರಣಕ್ಕೆ ಯತ್ನಿಸಿದ ಯುವಕರು ಎಂದು ತಿಳಿದು ಬಂದಿದೆ. ಈ ಮೂವರು ಯುವಕರು ಗ್ರಾಮದಲ್ಲಿ, ಯುವತಿಯೊರ್ವಳನ್ನು ಅಪಹರಿಸಲು ಬಂದಿದ್ದೂ, ಅನುಮಾನಗೊಂಡ ಗ್ರಾಮಸ್ಥರು, ಹಿಡಿದು ಥಳಿಸಿದ್ದಾರೆ, ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ನಾಗಮಂಗಲ ಗ್ರಾಮಾಂತರ ಪೊಲೀಸರು ಆಗಮಿಸಿದ್ದು. ಮುಂದಿನ ಕ್ರಮ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ