ನೀಲಿ ಬಣ್ಣ ಧ್ವಜ ಹಾರಿಸಿ: ಆತಂಕ ಸೃಷ್ಟಿ !

Kannada News

26-08-2017

ವಿಜಯಪುರ: ಡಿ.ಎಸ್.ಎಸ್ ಧ್ವಜಾರೋಹಣ ಮಾಡುವ ಸ್ಥಳದಲ್ಲಿ ನೀಲಿ ಬಣ್ಣದ ಧ್ವಜ ಹಾರಿಸಿದ ಕಿಡಿಗೇಡಿಗಳು ಆತಂಕದ ವತಾವರಣ ಸೃಷ್ಟಿಸಿದ್ದಾರೆ. ಘಟನೆಯು ವಿಜಪುರದಲ್ಲಿ, ನಿನ್ನೆ ಮಧ್ಯರಾತ್ರಿ ನಡೆದಿದೆ. ಘಟನೆಯನ್ನು ಖಂಡಿಸಿದ್ದು, ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಎಂದು ಡಿ.ಎಸ್.ಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯಪುರ ತಾಲ್ಲೂಕಿನ ಜಾಲಗೇರಿ ಗ್ರಾಮದಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ದೌಡಾಯಿಸಿದ ತಿಕೋಟಾ ಪೊಲೀಸರು ಮಾಹಿತಿ ಪೆಡೆದುಕೊಂಡಿದ್ದಾರೆ. ಈ ಕೂಡಲೆ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಸ್ಥಳಿಯರ ಹಾಗೂ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಮುಂಜಾಗ್ರತಾ ಕ್ರಮವಾಗಿ, ಪೊಲೀಸರು ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ