ಕೊರಿಯರ್ ಪಾರ್ಸಲ್ ಗಳನ್ನು ದೋಚಿದ ಕಳ್ಳರು !

Kannada News

26-08-2017

ಮೈಸೂರು: ಬೆಳ್ಳಂಬೆಳಿಗ್ಗೆ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಕೊರಿಯರ್ ಸಂಸ್ಥೆಯೊಂದಕ್ಕೆ ಸೇರಿದ ಪಾರ್ಸಲ್ ಗಳನ್ನು ಕಳುವು ಮಾಡಿದ್ದಾರೆ. ಘಟನೆಯು ಮೈಸೂರಿನ ಚಾಮುಂಡಿಪುರಂನ ಒಂದನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಗ್ರಾಹಕರಿಗೆ ಸರಬರಾಜು ಮಾಡುವ ಗೂಡ್ಸ್ ಆಟೋದಲ್ಲಿ ಇರಿಸಲಾಗಿದ್ದ ಪಾರ್ಸಲ್ ಗಳನ್ನು ಕಳ್ಳರು ಲಪಟಾಯಿಸಿದ್ದಾರೆ. ಬ್ಲೂಡಾರ್ಟ್ ಕೊರಿಯರ್ ಸಂಸ್ಥೆಗೆ ಸೇರಿದ ಪಾರ್ಸಲ್ ಗಳಾಗಿದ್ದೂ, ಪಾರ್ಸಲ್ ಗಳನ್ನು ದೋಚಿದ್ದಾರೆ. ಕೆ.ಆರ್.ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೂ, ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ