'ಬ್ಲೂ ವೇಲ್' : ಬೆರಳು ಕೊಯ್ದುಕೊಂಡ ವಿದ್ಯಾರ್ಥಿನಿ

Kannada News

26-08-2017

ಹುಬ್ಬಳ್ಳಿ: ಸಾಯೋ ಆಟ ಎಂದೇ ಕುಖ್ಯಾತಿ ಪಡೆದಿರುವ, 'ಬ್ಲೂ ವೇಲ್' ಗೇಮ್ ಆಡುತ್ತಾ ತನ್ನ ಕೈ ಬೆರಳು ಕೊಯ್ದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯು ಹುಬ್ಬಳ್ಳಿಯಲ್ಲಿ ನಡೆದಿದ್ದೂ, ಹುಬ್ಬಳ್ಳಿಯ ರಾಜನಗರದ ಕೇಂದ್ರಿಯ ವಿದ್ಯಾಲಯದ  ವಿದ್ಯಾರ್ಥಿನಿ,  ತನ್ನ ಕೈ ಬೆರಳು ಕೊಯ್ದುಕೊಂಡಿದ್ದಾಳೆ. ಆರನೇ ತರಗತಿ ಓದುತ್ತಿರುವ ಜೀಜಾಬಾಯಿ ಬೆರಳು ಕೊಯ್ದುಕೊಂಡಿರುವುದು, ತಡವಾಗಿ ಬೆಳಕಿಗೆ ಬಂದಿದೆ. ವಿಷಯವನ್ನು ಆಕೆ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದು, ಸ್ನೇಹಿತರು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದ ಕೂಡಲೇ ವಿದ್ಯಾರ್ಥಿನಿಯನ್ನು ಕಚೇರಿಗೆ ಕರೆಯಿಸಿ ವಿಚಾರಿಸಿದ ಶಿಕ್ಷಕರು, ಮನೆಯಲ್ಲಿ ಗೇಮ್ ಆಡುವಾಗ ಬೆರಳು ಕೊಯ್ದು ಕೊಂಡಿದ್ದನ್ನು ಆಕೆ ಒಪ್ಪಿಕೊಂಡಿದ್ದಾಳೆ. ತನ್ನ ತಂದೆಯ ಮೊಬೈಲ್ ನಲ್ಲಿ ಗೇಮ್ ಡೌನ್ಲೋಡ್ ಮಾಡಿಕೊಂಡಿದ್ದ ಬಾಲಕಿ, ಈ ಗೇಮ್ ನ ಪ್ರಭಾವಕ್ಕೆ ಒಳಗಾಗಿ ಈ ರೀತಿ ಮಾಡಿಕೊಂಡಿದ್ದಾಳೆ. ಆಕೆಯ ಎದುರಿಗೆ ವಿಷಯ ದೊಡ್ಡದು ಮಾಡದೆ, ಗೇಮ್ ಅನ್ನು ಅನ್‌ ಇನ್ಸ್ಟಾಲ್ ಮಾಡುವಂತೆ ಶಿಕ್ಷಕರು ಸೂಚಿಸಿದ್ದಾರೆ. ಹೀಗಾಗಿ ಪೋಷಕರು ತಮ್ಮ ಮಕ್ಕಳು ಮೊಬೈಲ್ ಬಳಸುತ್ತಿರುವುದರ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ