ಡಿವೈಎಸ್ಪಿ ಸಾವು ಪ್ರಕರಣ: ನಾನು ಕರೆ ಮಾಡಿಲ್ಲ..?

Kannada News

24-08-2017

ಉಡುಪಿ: ಡಿ.ವೈ.ಎಸ್.ಪಿ ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಕಾಲ್ ಡಿಟೇಲ್ಸ್ ಡಿಲೀಟ್ ಆಗಿದೆ ಎಂದು ತಿಳಿಸಿದ್ದು, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಸೇರಿದಂತೆ 30 ಜನರ ಕಾಲ್ ಡಿಟೇಲ್ಸ್ ಡಿಲೀಟ್ ಆಗಿರುವುದಾಗಿಯೂ, ಈ ಕುರಿತು ಉಡುಪಿಯಲ್ಲಿ ಶಾಸಕ ವಿನಯ್ ಕುಮಾರ್ ಸೊರಕೆ ಪ್ರತಿಕ್ರಿಯೆ ನೀಡಿದ್ದಾರೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಸಂದರ್ಭ ಯಾವುದೇ ಕಾಲ್ ಬಂದಿಲ್ಲ, ಅವರು ನನಗೆ ಕರೆ ಮಾಡಿಲ್ಲ, ನಾನು ಸಹ ಅವರಿಗೆ ಕರೆ ಮಾಡಿಲ್ಲ ಎಂದರು. ಪುತ್ತೂರಲ್ಲಿ ಶಾಸಕನಾಗಿದ್ದಾಗ, ಗಣಪತಿ ಸಬ್ ಇನ್ಸ್ ಪೆಕ್ಟರ್ ಆಗಿದ್ದರು. ಅವರು ಉತ್ತಮ, ಕಟ್ಟುನಿಟ್ಟಿನ ಅಧಿಕಾರಿಯಾಗಿದ್ದರು. ನನಗೆ ಅವರ ಸಂಪರ್ಕ ಇತ್ತು, ಅಮಾನತು ಆದ ಸಂದರ್ಭದಲ್ಲಿಯೂ ನನ್ನ ಸಂಪರ್ಕ ಮಾಡಿದ್ದರು, ಅಲ್ಲದೇ, ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮನೆಗೂ ಬರುತ್ತಿದ್ದರು. ಅಮಾನತು ವಾಪಾಸ್ ಪಡೆದುಕೊಳ್ಳಲು ಕಮಿಷನರ್ ಗೆ, ಗೃಹಸಚಿವರ ಜೊತೆ ಮಾತನಾಡುವಂತೆ ಮನವಿ ಮಾಡಿದ್ದರು. ಎಂದು ವಿನಯ್ ಕುಮಾರ್ ಸೊರಕೆ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ