ಐಎಎಸ್, ಐಪಿಎಸ್ ಗೆ ಹೊಸ ಕೇಡರ್ ನೀತಿ !

Kannada News

24-08-2017

ಬೆಂಗಳೂರು: ದೇಶದ ಉನ್ನತ ಅಧಿಕಾರಿ ವರ್ಗದಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಖಚಿತಪಡಿಸಲು, ಕೇಂದ್ರ ಸರ್ಕಾರವು ಅಖಿಲ ಭಾರತೀಯ ಸೇವೆಗೆ ಆಯ್ಕೆಯಾಗುವ ಅಧಿಕಾರಿಗಳಿಗೆ ನೂತನ ಕೇಡರ್ ನೀತಿಯನ್ನು ಸಿದ್ಧಪಡಿಸಿದೆ.

ಹಾಲಿ ವ್ಯವಸ್ಥೆಯಲ್ಲಿ ಅಭ್ಯರ್ಥಿಗಳು ರಾಜ್ಯಾಧಾರಿತ ಕೇಡರ್'ನ್ನು ಆಯ್ಕೆ ಮಾಡುತ್ತಾರೆ. ಆದರೆ ಇನ್ನು ಮುಂದೆ  ಅಖಿಲ ಭಾರತೀಯ ಸೇವೆಗಳಾದ ಐಎಎಸ್, ಐಪಿಎಸ್, ಹಾಗೂ ಐಎಫ್‍ಎಸ್ ಅಭ್ಯರ್ಥಿಗಳು ತಮ್ಮ ಕೇಡರ್'ನ್ನು ರಾಜ್ಯಗಳ ಬದಲಾಗಿ ವಲಯಗಳನ್ನು (ಝೋನ್) ಆಯ್ಕೆ ಮಾಡಬೇಕಾಗುತ್ತದೆ.

ಈಗಿನ ವ್ಯವಸ್ಥೆಯಲ್ಲಿರುವ 26 ಕೇಡರ್'ಗಳನ್ನು 5 ವಲಯಗಳಲ್ಲಿ ವಿಂಗಡಿಸಲು ಕೇಂದ್ರ ಸಿಬ್ಬಂದಿ ಇಲಾಖೆಯು ನಿರ್ಧರಿಸಿದೆ. ಆ ಪ್ರಕಾರ ವಲಯ-5 ರಲ್ಲಿ ಕರ್ನಾಟಕ, ತೆಲಾಂಗಣ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಕೇರಳ ಕೇಡರ್'ಗಳಲ್ಲಿರುತ್ತವೆ. ವಲಯ-1 ರಲ್ಲಿ 7 ಕೇಡರ್'ಗಳು (ಅರುಣಾಚಲ ಪ್ರದೇಶ, ಗೋವಾ, ಮೀಝೋರಾಂ ಹಾಗೂ ಕೇಂದ್ರಾಡಳಿತ ಪ್ರದೇಶಗಳು), ವಲಯ-2ರಲ್ಲಿ  ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ ಮತ್ತು ಒಡಿಶಾ ಒಳಗೊಂಡಿರುತ್ತದೆ. ವಲಯ-3ರಲ್ಲಿ ಗುಜರಾತ್, ಮಹಾರಾಷ್ಟ್ರ,  ಮಧ್ಯ ಪ್ರದೇಶ ಹಾಗೂ ಛತ್ತೀಸಗಢವಿದ್ದರೆ,ಪಶ್ಚಿಮ ಬಂಗಾಳ, ಸಿಕ್ಕಿಂ, ಅಸ್ಸಾಂ-ಮೇಘಾಲಯ, ಮಣಿಪುರ, ತ್ರಿಪುರ ಮತ್ತು ನಾಗಾಲ್ಯಾಂಡ್ ಕೇಡರ್'ಗಳು ವಲಯ-4ರಲ್ಲಿ ಬರುತ್ತವೆ.

ಹೊಸ ನೀತಿಯ ಪ್ರಕಾರ, ಅಭ್ಯರ್ಥಿಗಳ ಆದ್ಯತೆ ವಲಯಾಧಾರಿತವಾಗಿರಬೇಕು. ಒಂದು ವಲಯದಿಂದ ಒಂದು ರಾಜ್ಯವನ್ನು ಮಾತ್ರ ಅಭ್ಯರ್ಥಿಗಳು ಆಯ್ಕೆ ಮಾಡಬಹುದಾಗಿದೆ. ಇತರ ಕೇಡರ್ ಆದ್ಯತೆಗಳನ್ನು ಕೂಡಾ ಬೇರೆ ಬೇರೆ ವಲಯಗಳಿಂದಲೇ ಆಯ್ಕೆ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಅಭ್ಯರ್ಥಿಗಳು ತಮ್ಮ ನೆರೆಹೊರೆಯ ರಾಜ್ಯ/ಕೇಡರ್'ಗಳನ್ನೇ ಆದ್ಯತೆಯಾಧಾರದಲ್ಲಿ ಆಯ್ಕೆ ಮಾಡುತ್ತಾರೆ. ಹೊಸ ವ್ಯವಸ್ಥೆಯಲ್ಲಿ ಆ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ