ಗಾಂಜಾ ಮಾರಾಟ: ಇಬ್ಬರ ಬಂಧನ !

Kannada News

24-08-2017

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ, ಬಿಹಾರ ಹಾಗೂ ಆಂಧ್ರಪ್ರದೇಶ  ಮೂಲದ ಇಬ್ಬರನ್ನು ಬಂಧಿಸಿರುವ ವೈಟ್‍ ಫೀಲ್ಡ್ ವಿಭಾಗದ ಪೊಲೀಸರು 16ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರ ಮೂಲದ ಮುಜಾಫಿರ್ ಮಂಡಲ್ (24), ಆಂಧ್ರಪ್ರದೇಶ  ರವಿ (30) ಬಂಧಿತ ಆರೋಪಿಗಳಾಗಿದ್ದಾರೆ. ಹರಳೂರು ರಸ್ತೆಯ ಶೋಭಾ ಎನ್‍ ಕ್ಲೇವ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ, ಆರೋಪಿ ಮಂಡಲ್ ನನ್ನು ಬಂಧಿಸಿ ಆತನಿಂದ 1 ಕೆ.ಜಿ 200 ಗ್ರಾಂ.ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದರೆ, ಮಾರತ್‍ ಹಳ್ಳಿ ಪೊಲೀಸರು ದೇವರ ಬೀಸನಹಳ್ಳಿಯ ಶನಿಮಹಾತ್ಮ ದೇವಸ್ಥಾನದ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ, ಆಂಧ್ರ ಮೂಲದ ರವಿಯಿಂದ 15 ಕೆ.ಜಿ ಗಾಂಜಾ ಹಾಗೂ ಟಿವಿಎಸ್ ಸ್ಕೂಟರ್‍ ಅನ್ನು ವಶಪಡಿಸಿಕೊಂಡು, ತನಿಖೆ ನಡೆಸಿದ್ದಾರೆಂದು ವೈಟ್‍ ಫೀಲ್ಡ್ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ