ಲಾರಿ ಡಿಕ್ಕಿ: ಮೀನು ವ್ಯಾಪಾರಿ ಸಾವು !

Kannada News

24-08-2017

ಬೆಂಗಳೂರು: ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಸ್ನೇಹಿತನ ಮನೆಗೆ ಸ್ಕೂಟರ್‍ ನಲ್ಲಿ ಹೋಗುತ್ತಿದ್ದ, ಮೀನು ವ್ಯಾಪಾರಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ಯಶವಂತಪುರದ ಬಿ.ಕೆ ನಗರದಲ್ಲಿ ಕಳೆದ ರಾತ್ರಿ ನಡೆದಿದೆ. ಬಿ.ಕೆ ನಗರದ ರಾಜು ಮೈಲಾಪಲ್ಲಿ (22) ಮೃತಪಟ್ಟವರು. ಮನೆಯಿಂದ ಹೋಂಡಾ ಸ್ಕೂಟರ್‍ ನಲ್ಲಿ ಮೈಲಾಪಲ್ಲಿ ಅವರು, ಹತ್ತಿರದ ಸ್ನೇಹಿತನ ಮನೆಗೆ ಚೌಡೇಶ್ವರಿ ನಿಲ್ದಾಣದಿಂದ ರೈಲು ನಿಲ್ದಾಣದ ಕಡೆ ಹೋಗುವಾಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.

ರಾತ್ರಿ 7.30ರ ವೇಳೆ ನಡೆದ ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೈಲಾಪಲ್ಲಿಯವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೈಲಾಪಲ್ಲಿಯವರು ಯಶವಂತಪುರ ಮಾರುಕಟ್ಟೆಯಲ್ಲಿ, ಮೀನು ವ್ಯಾಪಾರ ಮಾಡುತ್ತಿದ್ದರು. ಪ್ರಕರಣ ದಾಖಲಿಸಿರುವ ಯಶವಂತಪುರ ಸಂಚಾರ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ