ಯಡ್ಡಿಗೆ ಲಿಂಗಾಯತ ಧರ್ಮದ ಬಗ್ಗೆ ಗೊತ್ತಿಲ್ಲ..?

Kannada News

24-08-2017

ಬೆಂಗಳೂರು: ಪ್ರತ್ಯೇಕ ಲಿಂಗಾಯುತ ಧರ್ಮ, ವಿಚಾರಕ್ಕೆ ಸಂಬಂಧಿಸಿದಂತೆ ಮಠಾಧೀಶರ ವಿರುದ್ಧ ಗರಂ ಆದ ಸಚಿವ ಬಸವರಾಜ್ ರಾಯರೆಡ್ಡಿ, ಬೀದಿ ಬೀದಿಗಳಲ್ಲಿ ಬಡಿದಾಡುವುದನ್ನ ಮೊದಲು ಬಿಡಿ, ಎಲ್ಲರೂ ಕುಳಿತು ಒಟ್ಟಾಗಿ ಚರ್ಚೆ ಮಾಡಿ ಎಂದು ಮಠಾಧೀಶರಿಗೆ ಕಿವಿಮಾತು ಹೇಳಿದ್ದಾರೆ. ಇದರಲ್ಲಿ ರಾಜಕಾರಣಿಗಳ ಕೆಲಸ ಏನು ಇಲ್ಲ ಎಂದರು. ಯಡಿಯೂರಪ್ಪ ಒಂದು ಕಡೆ ಲಿಂಗಾಯತ ಧರ್ಮಕ್ಕೆ ಸಹಿ ಮಾಡುತ್ತಾರೆ, ಮತ್ತೊಂದೆಡೆ ಲಿಂಗಾಯತರು ಬೇರೆ ಅಲ್ಲ, ಅವರು ಹಿಂದುಗಳು ಅಂತಾರೆ, ಅವರೆಲ್ಲ ಆರ್.ಎಸ್.ಎಸ್, ಮನುವಾದಿಗಳಾಗಿದ್ದಾರೆ. ಯಡಿಯೂರಪ್ಪ ಅವರಿಗೆ ಲಿಂಗಾಯತ ಧರ್ಮದ ಬಗ್ಗೆ ಗೊತ್ತಿಲ್ಲ, ಬಿಜೆಪಿ ಮುಖಂಡರು ಈ ವಿಚಾರದಲ್ಲಿ ಬಾಯಿ ಬಿಡುತ್ತಿಲ್ಲ. ಅದಕ್ಕಾಗಿಯೇ ಅವರು ಮನುವಾದಿಗಳು ಎಂದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಲಿಂಗಾಯತರಲ್ಲ ಎಂದು ಹೇಳಿದ ಅವರು, ಲಿಂಗಾಯತ ಧರ್ಮಕ್ಕಾಗಿ ಒಂದಾಗಿ ಬರಲಿ, ಸಿಎಂ ಕೂಡ ಒಟ್ಟಾಗಿ ಬನ್ನಿ ಎಂದು ಹೇಳಿದ್ದಾರೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ