ಗಣೇಶ ಉತ್ಸವಕ್ಕೆ: ಭಾರೀ ಭದ್ರತೆ !

Kannada News

24-08-2017

ಬೆಳಗಾವಿ: ರಾಜ್ಯದ ಬೆಳಗಾವಿ ಗಣೇಶನ ಉತ್ಸವಕ್ಕೆ ಸಜ್ಜಾಗಿದ್ದು, ಸಂಭ್ರಮದ ವೇಳೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು, ಬೆಳಗಾವಿ ನಗರ ಪೊಲೀಸ್ ಆಯುಕ್ತರು ತಿಳಿಸಿದರು. ಪೊಲೀಸ್ ಬಿಗಿ ಬಂದೊಬಸ್ತ್ ಕುರಿತು ನಗರ ಪೊಲೀಸ್ ಆಯುಕ್ತರಾದ, ಕೃಷ್ಣ ಭಟ್ ಸುದ್ದಿಗೊಷ್ಟಿ ನಡೆಸಿ ಮಾಹಿತಿ ನೀಡಿದರು. 11 ದಿನದ ಭದ್ರತೆಗೆ, ಸುಮಾರು 4102 ಸಿಬ್ಬಂದಿ ಬಳಕೆ ಮಾಡಲಾಗಿದೆ ಎಂದೂ, 4 ಡಿಸಿಪಿ, 14 ಎಸಿಪಿ, 64ಸಿಪಿಐ, 98 ಪಿಎಸ್ಐ ಸೇರಿದಂತೆ ಒಟ್ಟು 4102 ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿಸಿದರು. ಜೊತೆಗೆ 10 ಕೆ.ಎಸ್.ಆರ್.ಪಿ ಪ್ರಹಾರ ದಳ, 02 ನಗರ ಸಶಸ್ತ್ರ ದಳ, ನಿಯೋಜಿಸಲಾಗಿದ್ದು, ಮುಖ್ಯ ಮೆರವಣಿಗೆ ಮಾರ್ಗದಲ್ಲಿ 210 ಸಿಸಿಟಿವಿ ಕ್ಯಾಮರಾ ಮತ್ತು 09 ಟ್ರ್ಯಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ ಕ್ಯಾಮರಾಗಳನ್ನೂ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ