ಪಿಎಫ್ಐ ನಿಷೇಧಕ್ಕೆ ಒತ್ತಾಯ: ಬೈಕ್ ರ‍್ಯಾಲಿ !

Kannada News

24-08-2017

ಮಂಗಳೂರು: ರಾಜ್ಯದಲ್ಲಿ ಪಿಎಫ್ಐ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಬಿಜೆಪಿ ಯುವಮೋರ್ಚಾದಿಂದ ಮಂಗಳೂರಿಗೆ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದೂ, ಸೆಪ್ಟಂಬರ್ 5 ರಂದು ಹುಬ್ಬಳ್ಳಿಯಲ್ಲಿ ಬೈಕ್ ರ‍್ಯಾಲಿ ಗೆ ಚಾಲನೆ ನೀಡಲಾಗುವುದೆಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ರಾಜ್ಯದಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ, ಪಿಎಫ್ಐ ಸಂಘಟನೆ ಈ ಕೃತ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದರು. ಹತ್ಯೆ ಪ್ರಕರಣಗಳ ತನಿಖೆಯನ್ನು  ಸಿಬಿಐಗೆ ವಹಿಸಬೇಕು ಹಾಗೂ ಸಚಿವ ರಮಾನಾಥ್ ರೈ ರಾಜಿನಾಮೆಗೆ ಒತ್ತಾಯಿಸಿ ರ‍್ಯಾಲಿ ನಡೆಸಲಾಗುವುದೆಂದು ಹೇಳಿದರು. ರಾಜ್ಯದ ಐದು ಭಾಗಗಳಿಂದ ಬೈಕ್ ರ‍್ಯಾಲಿ ನಡೆಸಲಿದ್ದೂ, ಸೆಪ್ಟೆಂಬರ್ 7 ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 10,000 ಕ್ಕೂ ಅಧಿಕ ಜನರು ಬೈಕ್ ರ‍್ಯಾಲಿ ಯಲ್ಲಿ ಭಾಗಿಯಾಗಲಿದ್ದಾರೆ ಎಂದರು. ರ‍್ಯಾಲಿ ಮತ್ತು ಬೃಹತ್ ಪ್ರತಿಭಟನೆಯ ಮೂಲಕ  ರಾಜ್ಯಾದ್ಯಂತ ಪಿಎಫ್ಐ ಹಾಗೂ ಕೆ.ಎಫ್.ಡಿ ನಿಷೇಧಕ್ಕೆ ಒತ್ತಾಯಿಸಲಾಗುವುದು ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ