ಜನವರಿ-ಜುಲೈವರೆಗೆ 499 ಮಕ್ಕಳ ಸಾವು !

Kannada News

24-08-2017

ಮೈಸೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳ ಸಾವು ಪ್ರಕರಣಗಳು ಹೆಚ್ಚಾಗುತ್ತಿದ್ದೂ, ಮೈಸೂರಿನ ಚೆಲುವಾಂಬ ಸರ್ಕಾರಿ ಆಸ್ಪತ್ರೆಯಲ್ಲೂ ಶಿಶು ಹಾಗೂ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಳವಾಗಿರುವುದು ಕಂಡುಬಂದಿದೆ. 2017ರಲ್ಲಿ ಜನವರಿಯಿಂದ ಜುಲೈ ಅಂತ್ಯದವರೆಗೆ 499 ಮಕ್ಕಳು ಸಾವನ್ನಪ್ಪಿರುವುದು ವರದಿಯಾಗಿದೆ. ವಿವಿಧ ವಯೋಮಿತಿಯ 499 ಮಕ್ಕಳು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ ಅಧಿಕೃತ ದಾಖಲೆಗಳಿಂದ ತಿಳಿದು ಬಂದಿದೆ.

1 ತಿಂಗಳ ಒಳಗಿನ 342 ನವಜಾತ ಶಿಶುಗಳು ಸಾವು. 1 ತಿಂಗಳಿನಿಂದ 1 ವರ್ಷದೊಳಗಿನ 84 ಮಕ್ಕಳು ಸಾವು. 1 ವರ್ಷದಿಂದ 5 ವರ್ಷದೊಳಗಿನ 34 ಮಕ್ಕಳು ಸಾವು. 5 ವರ್ಷದ ಮೆಲ್ಪಟ್ಟ 39 ಮಕ್ಕಳು ಸಾವು. ಮಕ್ಕಳ ಸಾವಿಗೆ ನಾನಾ ಕಾರಣಗಳಿವೆ ಎಂದು ಹೇಳುತ್ತಿರುವ ಆಸ್ಪತ್ರೆಯ ವೈದ್ಯರು, ಅವಧಿಗೂ ಮುನ್ನ ಜನನ, ಹುಟ್ಟಿದ ತಕ್ಷಣ ಮಗುವಿಗೆ ಚಲನ ವಲನ ಇಲ್ಲದಿರುವುದು, ಹೃದಯ ಸಂಬಂಧಿ ಕಾಯಿಲೆ, ಮೆದುಳು ಜ್ವರ ಕಾರಣವಾಗಿವೆ ಎಂದು ತಿಳಿದು ಬಂದಿದೆ. ಇತ್ತಿಚಿನ ಎರಡು ತಿಂಗಳ ಅವಧಿಯಲ್ಲಿ ಡೆಂಘಿ ಪ್ರಕರಣದಿಂದಲೂ ಮಕ್ಕಳು ಸಾವನ್ನಪ್ಪಿದ್ದಾರೆಂದು, ಚೆಲುವಾಂಬ ಆಸ್ಪತ್ರೆಯ ಆಡಳಿತ ವರ್ಗ ಮಾಹಿತಿ ನೀಡಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ