ಹುಡುಗಾಟಿಕೆ ಬಿಟ್ಟು ಪ್ರೌಢರಂತೆ ವರ್ತಿಸಿ..?

Kannada News

23-08-2017

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಸಂಸದೆ ರಮ್ಯಾ ಟೀಕಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ, ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ. ರಮ್ಯಾಗೆ ಪ್ಲಾಸ್ಟಿಕ್ ಆಟಿಕೆಗಳ ಬಾಗೀನ ಕಳುಹಿಸಿದ ಕಾರ್ಯಕರ್ತರು, ಹುಡುಗಾಟಿಕೆ ಬುದ್ದಿ ಬಿಟ್ಟು ಪ್ರೌಢರಂತೆ ವರ್ತಿಸಲು ರಮ್ಯಾಗೆ ಸಲಹೆ ನೀಡಿದ್ದಾರೆ. ಮಂಡ್ಯದಲ್ಲಿರುವ ರಮ್ಯಾ ಅವರ ಮನೆ ವಿಳಾಸಕ್ಕೆ ಅಂಚೆ ಮೂಲಕ ಬಾಗೀನ ರವಾನೆ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಅಸ್ಸಾಂ, ಗುಜರಾತ್, ಬಿಹಾರ ನೆರೆ ಸಂತ್ರಸ್ಥರನ್ನ ಭೇಟಿಯಾಗಿ ಸ್ವಾಂತನ ಹೇಳಿದ ಪೋಟೋ ಕಳುಹಿಸಿದ್ರೆ ಬಹುಮಾನ ಕೊಡೋದಾಗಿ ಹೇಳಿದ್ದ ರಮ್ಯಾ, ಇಂತಹ ಪೋಟೋ ಹುಡುಕಿ‌ ಕೊಟ್ಟರೆ 25 ಸಾವಿರ ಬಹುಮಾನ ಕೊಡೋದಾಗಿ ಟ್ವಿಟರ್‌ ನಲ್ಲಿ ಬರೆದಿದ್ದರು. ಇದಕ್ಕೆ ಮಂಡ್ಯ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದೂ, ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ