ಬೈಕ್ ಡಿಕ್ಕಿ ವೃದ್ಧ ಸಾವು !

Kannada News

23-08-2017

ಬೆಂಗಳೂರು: ಯಲಹಂಕದ ವೆಂಕಟಾಲ ಬಳಿ ನಿನ್ನೆ ರಾತ್ರಿ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು, ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರು ಮೃತಪಟ್ಟರೆ, ಬೈಕ್ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಮೃತಪಟ್ಟವರನ್ನು ವೆಂಕಟಾಲದ ಮುನಿಕೃಷ್ಣಪ್ಪ (62)ಎಂದು ಗುರುತಿಸಲಾಗಿದೆ. ಅಪಘಾತವೆಸಗಿದ ಯಲಹಂಕದ ನಾಜಿರ್ (16) ತಲೆಗೆ ಗಾಯಗೊಂಡು ಅಪೂರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

ಯಲಹಂಕದ ಮುನೇಶ್ವರ ದೇವಾಲಯದ ನಿರ್ವಹಣೆ ನೋಡಿಕೊಳ್ಳುತ್ತಿದ್ದ ಮುನಿಕೃಷ್ಣಪ್ಪ ರಾತ್ರಿ 8.30ರ ವೇಳೆ ದೇವಾಲಯದಿಂದ ಮನೆಗೆ ಹೋಗಲು ವೆಂಕಟಾಲದ ಸರ್ವೀಸ್ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬೈಕ್ ನಲ್ಲಿ ಬಂದ ನಾಜಿರ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಪ್ರಕರಣ ದಾಖಲಿಸಿರುವ ಯಲಹಂಕ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.

 

 


ಸಂಬಂಧಿತ ಟ್ಯಾಗ್ಗಳು

ಬೆಂಗಳೂರು ಬೈಕ್ ವೃದ್ಧ ಸಾವು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ