ಬಸ್ ಟಾಪ್ ಮೇಲೆ ಪ್ರಯಾಣ: ಪ್ರಾಣಕ್ಕೆ ಕುತ್ತು !

Kannada News

23-08-2017

ಚಿತ್ರದುರ್ಗ: ವಿದ್ಯುತ್ ತಂತಿ ತಗುಲಿ ಬಸ್ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ, ಕಲಮರಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಬಸ್ ಟಾಪ್ ಮೇಲೆ ಕುಳಿತಿದ್ದ ಪ್ರಯಾಣಿಕನಿಗೆ ವಿದ್ಯುತ್ ತಂತಿ ತಗುಲಿ ಬಸ್ ನಿಂದ ಕೇಳಗೆ ಬಿದ್ದು ಮೃತಪಟ್ಟಿದ್ದಾರೆ. ಜಡೇಕುಂಟೆ ಗ್ರಾಮದ ಮಹೇಶ್(30) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಹೇಶ್ ಎಂಬುವರು ಬಸ್ ಟಾಪ್ ಮೇಲೆ ಕುಳಿತು ಪ್ರಯಾಣಿಸುತ್ತಿದ್ದ ವೇಳೆ, ಚಳ್ಳಕೆರೆಯ ಕಲಮರಹಳ್ಳಿಯ ಬಳಿ ವಿದ್ಯುತ್ ತಂತಿ ತಗುಲಿದೆ, ಈ ವೇಳೆ ವಿದ್ಯುತ್ ಹರಿದು ಏಕಾಏಕಿ ಕೆಳಗೆ ಬಿದ್ದ ಅವರು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೂ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ