ಹಾಡಹಗಲೇ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ !

Kannada News

23-08-2017 296

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಹಾಡಹಗಲೇ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರ, ಅಪಹರಣಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಮಂಡ್ಯ ಮೂಲದ ರಾಧಾ ಅಪಹರಣಕ್ಕೆ ಒಳಗಾಗಿದ್ದ ಯುವತಿ. ಚಾಮರಾಜನಗರದಲ್ಲಿ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿನಿ, ತನ್ನ ಪರಿಚಯಸ್ಥರನ್ನು ನೋಡಲು ನಂಜನಗೂಡಿಗೆ ಬಂದಿದ್ದರು. ಈ ವೇಳೆ ನಿಮ್ಮ ಪರಿಚಯಸ್ಥರು ತನಗೂ ಪರಿಚಯಸ್ಥರೆ ಎಂದು ಹೇಳಿ, ಮಹಿಳೆಯೊಬ್ಬರು ಬಸ್ ನಿಲ್ದಾಣದ ಬಳಿ ವ್ಯಾನ್ ಹತ್ತಿಸಿಕೊಂಡಿದ್ದಾರೆ. ಸ್ವಲ್ಪ ದೂರ ಹೋದ ನಂತರ ವ್ಯಾನ್ ಡ್ರೈವರ್ ನಡವಳಿಕೆಯಿಂದ ಅನುಮಾನಗೊಂಡಿದ್ದೂ, ಯುವತಿಯ ಬಾಯಿ ಮುಚ್ಚಲು ಮುಂದಾದ ಮಹಿಳೆ ಮತ್ತು ಡ್ರೈವರ್ ನ ಕೈಕಚ್ಚಿ, ವ್ಯಾನ್ ನಿಂದ ಕೆಳಗೆ ಜಿಗಿದು ತಪ್ಪಿಸಿಕೊಂಡಿದ್ದಾರೆ. ಇದಾದ ಬಳಿಕ ಘಟನೆ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೂ, ಯುವತಿಯಿಂದ ಪೊಲೀಸರು ಘಟನೆ ವಿವಿರ ಪಡೆದು, ತನಿಖೆ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ