ಬಿಜೆಪಿ-ಕಾಂಗ್ರೆಸ್ ನವರ ಬಂಡವಾಳ ನನಗೆ ಗೊತ್ತು..?

Kannada News

23-08-2017

ಹುಬ್ಬಳ್ಳಿ: ನಾನು‌ ಇನ್ನು ದೆಹಲಿಗೆ ಹೋಗುವುದಿಲ್ಲ ರಾಜ್ಯದಲ್ಲೇ ಇರುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಐದು ದಿನಗಳಿಂದ ಪ್ರವಾಸ ಕೈಗೊಂಡಿದ್ದೂ, ಪಕ್ಷ ಸಂಘಟನೆಗೆ,ಪಕ್ಷದ ಪ್ರಮುಖರನ್ನ ಭೇಟಿ ಮಾಡಿ, ಆರು ತಂಡಗಳನ್ನು ಮಾಡಲಾಗಿದೆ, ಈ ತಂಡ ಪ್ರತಿಯೊಂದು ಜಿಲ್ಲೆಯಲ್ಲಿ ಪ್ರವಾಸ ಮಾಡಿ, ಪಕ್ಷದ ವರದಿ‌ ನೀಡಲಿದ್ದಾರೆ ಎಂದು ತಿಳಿಸಿದರು. ಅಭ್ಯರ್ಥಿಗಳ ಆಯ್ಕೆ ಸೆಪ್ಟಂಬರ್ ನಲ್ಲಿ ಮಾಡಲಾಗುವುದು. ಉತ್ತರ ಕರ್ನಾಟಕ‌ ಪ್ರವಾಸ ಬಳಿಕ, ಹೈದ್ರಾಬಾದ್ ಕರ್ನಾಟಕ ಪ್ರವಾಸ ಮಾಡಲಾಗುವುದು ಎಂದರು. ಎಷ್ಟು ಸ್ಥಾನ ಗೆಲ್ಲುತ್ತೆವೆ ಎಂಬುದರ ಕುರಿತು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ ಎಂದರು. ಸಮೀಕ್ಷೆ ಕೆಲವರಿಗೆ ಖುಷಿ‌ ಕೊಟ್ಟಿರಬಹುದು, ಮತ್ತೆ ಕೆಲವರಿಗೆ ನಿರಾಸೆ ಯಾಗಿರಬಹದು, ಆದ್ರೇ ನಿರಾಸೆಯಾದವರು ಪಕ್ಷ ಸಂಘಟನೆಗೆ ಒತ್ತು‌ ನೀಡಲಿ. ನನ್ನ‌ ಮುಂದಿನ ಗುರಿ ‌ಸಾಲಮನ್ನಕ್ಕೆ, ದೆಹಲಿಗೆ ಹೋಗುವುದು ಬೇಡ, ಇಲ್ಲೇ ನಮ್ಮ ರಾಜ್ಯದಲ್ಲೇ ಸಾಲಮನ್ನಾ ಮಾಡುವ ಸರ್ಕಾರ ತರುವುದೇ ನನ್ನ ಗುರಿ,  ಕೇಂದ್ರ ಸರ್ಕಾರಕ್ಕೆ ಕೆಲ ರಾಜ್ಯಗಳು ಮಾತ್ರ‌ ಕಾಣಿಸುತ್ತಿದೆ ಎಂದು ಕೇಂದ್ರ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮಹದಾಯಿ ವಿವಾದ ಕುರಿತು ಮಾತನಾಡಿದ ಅವರು, ಮಹಾದಾಯಿ ಮೋದಿಗೆ ದೊಡ್ಡ ವಿಚಾರವಲ್ಲ, ಇದರಲ್ಲಿ ರಾಜಕೀಯ ಮಾಡೋದು ಯಾಕೆ? ಎಂದಿದ್ದಾರೆ. ನಾನು ಕಾವೇರಿ ವಿಚಾರದಲ್ಲಿ ತೆಗದುಕೊಂಡಿ ನಿರ್ಧಾರ ಮೋದಿ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ, ವಾಗ್ದಾಳಿ ನಡೆಸಿದ ಎಚ್.ಡಿ ದೇವೇಗೌಡರು, ಪಾರದರ್ಶಕ ಸರ್ಕಾರ ಕೊಡುತ್ತೇನೆ ಎಂದಿದ್ದರು ಎಲ್ಲಿ‌ಕೊಟ್ಟಿದ್ದಾರೆ, ಬಿಜೆಪಿ-ಕಾಂಗ್ರೆಸ್ ನವರ ಬಂಡವಾಳ ನನಗೆ ಗೊತ್ತು, ಮೂರೂವರೆ ವರ್ಷ ಯಡಿಯೂರಪ್ಪ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಮಾತನಾಡಿದ್ರಾ? ಎಂದು ಪ್ರಶ್ನಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ