ಪ್ರತಿಭಟನಾಕಾರನ ಶೆಡ್ ಕಿತ್ತು ಹಾಕಿದ ಪಿಡಿಒ !

Kannada News

23-08-2017

ಕೊಪ್ಪಳ: ಪ್ರತಿಭಟನೆಗೆ ಹಾಕಿದ್ದ ಶೆಡ್ ಕಿತ್ತು ಹಾಕಿ, ಪ್ರತಿಭಟನಾ ನಿರತನ ಮೇಲೆ 'ಪಿಡಿಒ' ದೌರ್ಜನ್ಯ ಎಸಗಿರುವ ಘಟನೆ, ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕಿಲ್ಲಾರಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿಯ ಪಿಡಿಒ ಚಂದ್ರಶೇಖರ್, ಹೋರಾಟಗಾರನ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿಯಲ್ಲಿ 2005-06 ರಿಂದ 2015-06 ರವರೆಗೆ, ‌ವಿವಿಧ ಯೋಜನೆಗಳಲ್ಲಿ ನಡೆದ, ಕೋಟ್ಯಾಂತರ ರೂಪಾಯಿ ಅವ್ಯವಹಾರದ ಕುರಿತು ತನಿಖೆಗೆ ಆಗ್ರಹಿಸಿ, ಗ್ರಾಮದ ಬಾಲರಾಜ್ ಯಾದವ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಪ್ರತಿಭಟನೆಗೆ, ಗ್ರಾಮ ಪಂಚಾಯತಿ ಆವರಣದಲ್ಲಿ  ಶೆಡ್ ಹಾಕಿಕೊಂಡಿದ್ದರು. ಇದರಿಂದ ಕೆರಳಿದ 'ಪಿಡಿಒ' ಬೇರೆ ಕಡೆ ಶೆಡ್ ಹಾಕಿಕೋ ಎಂದು, ಶೆಡ್ ಕಿತ್ತು ಹಾಕಿದ್ದಾರೆ. ಶೆಡ್ ಕಿತ್ತು ಹಾಕಿದ ಹಿನ್ನೆಲೆಯಲ್ಲಿ, ಬಯಲಿನಲ್ಲಿಯೇ ಪ್ರತಿಭಟನೆಗೆ ಕುಳಿತ ಬಾಲರಾಜ ಯಾದವ್ ಪ್ರತಿಭಟನೆ ಮುಂದುವರೆಸಿದ್ದಾರೆ. ನಿನ್ನೆಯಿಂದ ಉಪವಾಸ ಕುಳಿತರೂ ಗ್ರಾಮ ಪಂಚಾಯತಿ ಆಡಳಿತದಿಂದ ಯಾವುದೇ ಸ್ಪಂದನೆ ಸಿಗದಿದ್ದೂ, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡುವಂತೆ, ಪ್ರತಿಭಟನಾ ನಿರತ ಬಾಲರಾಜ್ ಯಾದವ್ ಒತ್ತಾಯಿಸಿದ್ದಾರೆ. ಬಿಸಿಲಿನಲ್ಲಿ ಪ್ರತಿಭಟನೆಗೆ ಕುಳಿತ ಹಿನ್ನೆಲೆಯಲ್ಲಿ ಸ್ಥಳೀಯರು ಶೆಡ್ ವ್ಯವಸ್ಥೆ ಮಾಡಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ