ಹನಿಟ್ರ್ಯಾಪ್: 5 ಮಂದಿ ಬಂಧನ !

Kannada News

23-08-2017

ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ಬಳಿ, ಹನಿಟ್ರ್ಯಾಪ್ ಪ್ರಕರಣ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಯುವತಿಯನ್ನು ಮುಂದೆಬಿಟ್ಟು ದರೋಡೆ ಮಾಡುತ್ತಿದ್ದ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಧುಸೂದನ್, ಚೇತನ್, ಹೇಮಂತ್ , ಗಿರೀಶ್, ವಿನೋದ್ ಬಂಧಿತ ಆರೋಪಿಗಳು. ಮೈಸೂರು-ನಂಜನಗೂಡು ರಸ್ತೆಯಲ್ಲಿ ಶ್ರೀಮಂತ ವ್ಯಕ್ತಿಗಳ ಕಾರಿಗೆ ಕೈತೋರಿ ನಿಲ್ಲಿಸಿ, ದರೋಡೆಗೆ ಸಂಚು ಹಾಕುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ. 8 ಮಂದಿ ತಂಡ ಕಟ್ಟಿಕೊಂಡು ದರೋಡೆ ನಡೆಸುತ್ತಿದ್ದ ದರೋಡೆಕೋರರಲ್ಲಿ, ಪೊಲೀಸರನ್ನು ಕಂಡು ಒರ್ವ ಯುವತಿ ಹಾಗೂ ಇಬ್ಬರು ಯುವಕರು ಪರಾರಿಯಾಗಿದ್ದಾರೆ. ಬಂಧಿತರು ಶ್ರೀಮಂತರನ್ನೇ ಟಾರ್ಗೆಟ್ ಮಾಡುತ್ತಿದ್ದರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಾಲಾ ಎಂಬ ಯುವತಿಯನ್ನು ಶ್ರೀಮಂತರೊಂದಿಗೆ ಕಳುಹಿಸಿ ನಂತರ ಅವರ ಮೇಲೆ ದಾಳಿ ಮಾಡಿ ದೋಚುತ್ತಿದ್ದರು. ಬಂಧಿತರಿಂದ 2 ಕಾರು, ಕಾರದಪುಡಿ, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಗಳು ವಶಪಡಿಸಕೊಳ್ಳಲಾಗಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಸಂಬಂಧಿತ ಟ್ಯಾಗ್ಗಳು

ಮೈಸೂರು ಹನಿಟ್ರ್ಯಾಪ್ 5 ಮಂದಿ ಬಂಧನ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ