ಪತ್ನಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ !

Kannada News

22-08-2017

ಬೆಂಗಳೂರು: ಶ್ರೀರಾಂಪುರದ ಸನ್ ರೈಸ್ ವೃತ್ತದಲ್ಲಿ ಪತಿಯೇ, ಪತ್ನಿಯ ಕುತ್ತಿಗೆಗೆ ಹಗ್ಗ ಬಿಗಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿರುವ ದುರ್ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ. ಶ್ರೀರಾಂಪುರದ ಸನ್ ರೈಸ್ ವೃತ್ತದಲ್ಲಿ ವಾಸಿಸುತ್ತಿದ್ದ ಜಾನಕಿ ಜ್ಯೋತಿ (45)ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ. ಕೃತ್ಯವೆಸಗಿ ಪರಾರಿಯಾಗಿರುವ ಪತಿ ಚಂದ್ರಶೇಖರ್‍ ಗಾಗಿ ಶ್ರೀರಾಂಪುರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಚೇತನ್‍ ಸಿಂಗ್ ತಿಳಿಸಿದ್ದಾರೆ.

ಹೂವಿನ ಅಲಂಕಾರ(ಫ್ಲವರ್ ಡೆಕೋರೇಟರ್)ಮಾಡುತ್ತಿದ್ದ ಚಂದ್ರಶೇಖರ್ ಕಳೆದ 15 ವರ್ಷಗಳ ಹಿಂದೆ ಜಾನಕಿ ಜ್ಯೋತಿಯನ್ನು ವಿವಾಹವಾಗಿದ್ದ, ದಂಪತಿಗೆ 2 ಹೆಣ್ಣು, 4 ಗಂಡು ಮಕ್ಕಳಿದ್ದಾರೆ. ಮೊದಲಿಗೆ ಸುಂದರವಾಗಿದ್ದ ಇಬ್ಬರ ಸಂಸಾರದಲ್ಲಿ ಕಳೆದ ನಾಲ್ಕು ವರ್ಷದಿಂದ ವಿರಸ ಉಂಟಾಗಿ ಜಗಳವಾಗಿ ಕೊರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಇಬ್ಬರು ದೂರವಾಗಿದ್ದವರು ಕೆಲದಿನಗಳ ಹಿಂದೆ ಒಟ್ಟಿಗೆ ಇದ್ದರು. ನಿನ್ನೆ ರಾತ್ರಿ ದಂಪತಿಯ ನಡುವೆ ಮತ್ತೆ ಜಗಳ ಉಂಟಾಗಿ ಆಕ್ರೋಶಗೊಂಡ ಚಂದ್ರಶೇಖರ್ ಮಕ್ಕಳೆಲ್ಲಾ ಮಲಗಿದ್ದಾಗ ಜಾನಕಿ ಜ್ಯೋತಿಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಹಸಿವಿನಿಂದ ಮಗು ಎದ್ದ ಮಗು ತಾಯಿಗಾಗಿ ಹುಡುಕಾಡಿದೆ.

ದೂರದಲ್ಲಿ ಕಂಡ ತಾಯಿಯ ಬಳಿ ತೆರಳಿ ಕರೆದು ಎಬ್ಬಿಸತೊಡಗಿದೆ. ಆದರೆ ತಾಯಿ ಮೇಲೆಳದಿದ್ದರಿಂದ, ಕಂದಮ್ಮ ತನ್ನ ಅಕ್ಕನ ಬಳಿ ತೆರಳಿದೆ. ಅಕ್ಕ ಎದ್ದು ತಾಯಿ ಬಳಿ ತೆರಳಿದಾಗ ಕತ್ತಿಗೆ ಹಗ್ಗ ಸುತ್ತಿರುವುದು ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಕೂಡಲೇ ಹಗ್ಗ ತೆಗೆದು ತಾಯಿಯನ್ನು ಎಬ್ಬಿಸಲು ಮುಂದಾದ ಮಕ್ಕಳಿಗೆ ತಾಯಿ ಮೃತಪಟ್ಟಿರುವುದು ಅರಿವಿಗೆ ಬಂದಿದೆ. ಮಕ್ಕಳು ಕೂಡಲೇ ತಮ್ಮ ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದು ಅಮ್ಮನಿಗಾಗಿ ರೋಧಿಸುತ್ತಿರುವ ಮಕ್ಕಳ ಕೂಗು ಮುಗಿಲುಮುಟ್ಟಿದೆ.

ಸುದ್ದಿ ತಿಳೀದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಶ್ರೀರಾಂಪುರ ಪೊಲೀಸರು ಪ್ರಕರಣ ದಾಖಲಿಸಿ ಪರಾರಿಯಾಗಿರುವ ಚಂದ್ರಶೇಖರ್‍ ಗಾಗಿ ತೀವ್ರ ಶೋಧ ನಡೆಸಿದ್ದಾರೆ. ಆರೋಪಿ ಚಂದ್ರಶೇಖರ್ ಮತ್ತೊಂದು ಮಹಿಳೆ ಜೊತೆ ಅನೈತಿಕ ಸಂಬಂಧವಿದ್ದು ಅದೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ