ಮೀಟರ್ ಬಡ್ಡಿ ದಂಧೆ: ವ್ಯಕ್ತಿ ಬಂಧನ !

Kannada News

22-08-2017

ಬೆಂಗಳೂರು: ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತನಿಂದ ಖಾಲಿ ಚೆಕ್‍ ಗಳು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್‍ ನ ಮುನೇಶ್ವರ ಬ್ಲಾಕ್‍ ನ ಗಿರೀಶ್ ಅಲಿಯಾಸ್ ಲೇಔಟ್‍ ಗುಂಡ (40) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯಿಂದ ಖಾಲಿ ಚೆಕ್‍ಗಳು, ಸಹಿ ಮಾಡಿರುವ ಖಾಲಿ ಇ-ಸ್ಟಾಂಪ್ ಪೇಪರ್‍ ಗಳು, ಖಾಲಿ ಪ್ರಾಮೀಸರಿ ನೋಟ್‍ಗಳು ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ. ಆರೋಪಿಯು ಪರವಾನಗಿ ಇಲ್ಲದೆ ಮುನೇಶ್ವರ ಬ್ಲಾಕ್‍ ನ 2ನೇ ಕ್ರಾಸ್‍ನಲ್ಲಿ ಕಚೇರಿ ತೆರೆದು ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದೆಡೆ ಮಹಾಲಕ್ಷ್ಮಿ ಲೇಔಟ್ ಗಣೇಶ ಬ್ಲಾಕ್‍ ನ ಮನೆಯೊಂದರಲ್ಲಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ 6 ಮಂದಿಯನ್ನು ಬಂಧಿಸಿ 41,600 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ