ಕರೆಂಟ್ ಶಾಕ್ ಕೊಟ್ಟು ವ್ಯಕ್ತಿ ಕೊಲೆ !

Kannada News

22-08-2017

ಬೆಂಗಳೂರು: ಮಾರತ್‍ ಹಳ್ಳಿಯ ಕುಂದಲಹಳ್ಳಿಯಲ್ಲಿ ಸೋಮವಾರ ರಾತ್ರಿ ಕೇಬಲ್ ವೈರ್ ಕಳವು ಮಾಡಿದ್ದಾರೆಂದು ಆರೋಪಿಸಿ, ಮೂವರು ಯುವಕರ ಮೇಲೆ ಹಲ್ಲೆ ನಡೆಸಿ ಅದರಲ್ಲಿ ಒರ್ವನನ್ನು ಕೊಲೆಮಾಡಿರುವುದು, ಕರೆಂಟ್ ಶಾಕ್ ಕೊಟ್ಟು ಎನ್ನುವುದು ಮಾರತ್‍ ಹಳ್ಳಿ ಪೊಲೀಸರು ನಡೆಸಿದ ತನಿಖೆಯಿಂದ ತಿಳಿದು ಬಂದಿದೆ ಪಶ್ಚಿಮ ಬಂಗಾಳ ಮೂಲದ ಬಷೀರ್ (20)ಗೆ ಕರೆಂಟ್ ಶಾಕ್‍ ಕೊಟ್ಟು ಕೊಲೆ ಮಾಡಲಾಗಿದ್ದು, ಕೃತ್ಯವೆಸಗಿದ ನಾಲ್ವರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಬಷೀರ್ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದು, ಗುಜುರಿ ಕೆಲಸ ಹುಡುಕಿಕೊಂಡು ಮೂರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದ ಆತ, ಕುಂದಲಹಳ್ಳಿಯ ಬಸುರೆಡ್ಡಿ ಎಂಬುವರ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ಹಫೀಸುಲ್ಲಾ ಮತ್ತು ಅಜ್ಮೈಲ್ ಜೊತೆ ವಾಸವಾಗಿದ್ದರು. ಕಳೆದ ಮೂರು ದಿನಗಳ ಹಿಂದೆ ಅದೇ ಜಮೀನಿನಲ್ಲಿ ಕೇಬಲ್ ವೈರ್ ಕಳ್ಳತನವಾಗಿತ್ತು. ಈ ಮೂವರು ಕಳ್ಳತನ ಮಾಡಿರಬಹುದೆಂದು ಶಂಕಿಸಿ ಅವರನ್ನು ಖಾಲಿ ಗೋದಾಮ್ ಒಂದರಲ್ಲಿ ಕಟ್ಟಿ ಹಾಕಿ, ಥಳಿಸಿ, ಬಷೀರ್ ಗೆ ಸ ಕರೆಂಟ್ ಶಾಕ್ ಕೊಡಲಾಗಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಲ್ಲೆಯಿಂದ ಗಾಯಗೊಂಡಿರುವ ಹಫೀಸುಲ್ಲಾ ಮತ್ತು ಅಜ್ಮೈಲ್ ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾರತ್‍ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ