ಸಾಲಬಾಧೆ: ಪತಿ-ಪತ್ನಿ ಆತ್ಮಹತ್ಯೆ !

Kannada News

22-08-2017

ಬೆಂಗಳೂರು: ಸಾಲದ ಬಾಧೆಯಿಂದ ಪತಿ-ಪತ್ನಿ ಇಬ್ಬರೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಢಿರುವ ಹೃದಯ ವಿದ್ರಾವಕ ಘಟನೆ, ನಗರದ ಕಲಾಸಿಪಾಳ್ಯದ ಪೈಪ್‍ ಲೇನ್ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ದೊಡ್ಡ ಮಾವಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದ ನಂಜುಂಡಸ್ವಾಮಿ(48),ಪುಷ್ಪಲತಾ (46) ಆತ್ಮಹತ್ಯಗೆ ಶರಣಾದ ದಂಪತಿಯಾಗಿದ್ದಾರೆ. ರಾತ್ರಿ 9ರ ವೇಳೆ ಮನೆಯಲ್ಲಿನ ಫ್ಯಾನ್‍ ಗೆ ಜತೆಯಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೋಟೆಲ್ ವ್ಯಾಪಾರದಲ್ಲಿ ನಷ್ಟ ಉಂಟಾಗಿ, ಅವರಿವರ ಬಳಿ ದಂಪತಿ ಸಾಲ ಮಾಡಿಕೊಂಡಿದ್ದು, ಅವರ ಪುತ್ರ ಕೂಡ ಸಾಲಗಾರನಾಗಿದ್ದ. ಸಾಲಗಾರರ ಬಾಧೆ ತಾಳಲಾರದೆ ಮಗ ಹೊರಗಡೆ ಹೋಗಿದ್ದಾಗ ನೇಣಿಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿರುವ ಕಲಾಸಿಪಾಳ್ಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ