ಪ್ರತಿ ಊರಿನಲ್ಲೂ ಬಸವ ಮಂಟಪ ಆಗಬೇಕು..!

Kannada News

22-08-2017

ಬೆಳಗಾವಿ: ಪ್ರತ್ಯೇಕ ಲಿಂಗಯತ ಧರ್ಮಕ್ಕೆ ಆಗ್ರಹಿಸಿ, ಬೆಳಗಾವಿಯಲ್ಲಿ ನಡೆಸಲಾದ ಬೃಹತ್ ಸಮಾವೇದಲ್ಲಿ ಮಾತೆ ಮಹಾದೇವಿ ಮಾತನಾಡಿದ್ದಾರೆ. ಮಾತೆ ಮಹಾದೇವಿ ತಮ್ಮ ಭಾಷಣದಲ್ಲಿ, ನಾವು ಲಿಂಗಾಯತ ಧರ್ಮದ ಸ್ವತಂತ್ರ ಅನುಯಾಯಿಗಳು, ಇದು ಐತಿಹಾಸಿಕ ಸಮಾರಂಭ, ಲಿಂಗಾಯತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ಬೇಕು, ಅದು ಸಿಕ್ಕಾಗಿದೆ, 1851 ರಲ್ಲಿ ಬ್ರಿಟಿಷರು ಕೊಟ್ಟಿದ್ದಾರೆ, ಆದರೇ ಕೆಲವರ ಕುಂತಂತ್ರದಿಂದ ಮೈಸೂರ ಮಹರಾಜರ ಮೂಲಕ ಅದನ್ನು ತಡೆ ಹಿಡಿದರು ಎಂದು ತಿಳಿಸಿದರು. ಮೊಹನ್ ಭಾಗವತ್ ಅವರು ಮೋದಿ ಅವರಿಗೆ ಹೇಳಿ ಮಾನ್ಯತೆ ಕೊಡಿಸಬೇಕು, ವೀರಶೈವ ಅಂಥ ಆದ್ರೂ ಹೇಳಿ, ಲಿಂಗಾಯತ ಅಂತಾ ಆದ್ರೂ ಹೇಳಿ, ಹಾಗೆ ಎರಡು ಹೇಳಿದರೆ ನಂಪುಂಸಕ ಅಂತಾರೆ, ಅಂಥವರನ್ನು ಹೊರಗೆ ಹಾಕಬೇಕು, ಲಿಂಗಾಯತ ಸಂಸದರು ನೀವು ಹುಟ್ಟಿದಾಗಲೂ ಲಿಂಗಾಯತರು, ಸತ್ತಾಗಲೂ ಲಿಂಗಾಯತರೂ, ಸತ್ತಾಗ ನಿಮ್ಮನ್ನು ಬಿಜೆಪಿ ಅನ್ನಲ್ಲಾ ಎಂದುರು. ಪ್ರತಿಯೊಂದು ಊರಿನಲ್ಲೂ ಬಸವ ಮಂಟಪ ಆಗಬೇಕು, ಪ್ರಾರ್ಥನಾ ಮಂದಿರಗಳು ಆಗಬೇಕು, ಮುಸ್ಲೀಮರು ಹೇಗೆ ಮಸೀದಿಗಳನ್ನು ಕಟ್ಟಿದ್ದಾರೋ, ಕ್ರೀಶ್ಚಿಯನ್ನು ಹೇಗೆ ಚರ್ಚುಗಳನ್ನು ಕಟ್ಟಿದ್ದಾರೋ ಹಾಗೆಯೇ ನಾವು ಬಸವ ಮಂಟಪ ಕಟ್ಟುವ ಅವಶ್ಯಕತೆ ಇದೆ ಎಂದು ಹೇಳಿದರು.      

ಜಗವ ಬದುಕಲು ನಮ್ಮ ಆದಿ ಬಸವಾದಿ ಶರಣರು ವಚನ ಸಾಹಿತ್ಯ ನೀಡಿದರು, ಆದರೆ ಜಾತಿ ವಾದಿಗಳಿಂದ ಅದಕ್ಕೆ ಆಪತ್ತು ಬಂದು ಎರಗಿದೆ. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕು. ಮೋಹನ್ ಭಾಗವತರು ಪ್ರಭಾವಿಗಳಿದ್ದಾರೆ, ಒಳ್ಳೆ ಸ್ಥಾನದಲ್ಲಿದ್ದಾರೆ ಅದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಹೇಳಿ ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ಕೊಡಿಸಲು ಒತ್ತಾಯ ಮಾಡಬೇಕು. ವೀರಶೈವ ಅನ್ನುವಂತೆ ಪದ ದಬ್ಬಾಳಿಗೆ ಮಾಡಿ ಉಪಚಾರ ಮಾಡಿಕೊಂಡಿದ್ದೀರ ಎಂದು, ಬಿಜೆಪಿ ವಿರುದ್ದ  ಮಾತೆ ಮಹಾದೇವಿ ವಾಗ್ದಾಳಿ ನಡೆಸಿದರು. ನೀವು ಟಿಕೆಟ್ ಪಡೆದುಕೊಳ್ಳುವಾಗ ಲಿಂಗಾಯತ ಕೋಟಾ ಅಡಿ ಟಿಕೆಟ್ ಪಡೆದುಕೊಳ್ಳುತ್ತಿರಿ. ನೀವು ಹುಟ್ಟುವಾಗ ಲಿಂಗಾಯತರು, ನೀವು ಸತ್ತಾಗ ಬಿಜೆಪಿ ಸಂಸ್ಕೃತಿ ಮಣ್ಣು ಮಾಡಲ್ಲ ಬದಲಾಗಿ ಲಿಂಗಾಯತ ಸಂಸ್ಕೃತ ದಿಂದ ಮಣ್ಣು ಮಾಡುತ್ತಾರೆ ಎಂದರು. ಸೆಪ್ಟೆಂಬರ್ 10 ರಂದು ಗುಲ್ಬರ್ಗದಲ್ಲಿ  ಮತ್ತು 30 ರಂದು ಲಾತೋರನಲ್ಲಿ  ಹೀಗೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಇದೇ ವೇಳೆ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ