ಹಳ್ಳಿ-ಹಳ್ಳಿಯಲ್ಲಿ ಬಸವ ಸೇನೆ ಪ್ರಾರಂಭಿಸ್ತೇವೆ..?

Kannada News

22-08-2017

ಬೆಳಗಾವಿ: ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆಗೆ ಆಗ್ರಹಿಸಿ, ಬೆಳಗಾವಿಯಲ್ಲಿ ನಡೆಸಲಾದ ಬೃಹತ್ ಸಮಾವೇಶದಲ್ಲಿ ಸಚಿವ ವಿನಯ್ ಕುಲಕರ್ಣಿ ಮಾತನಾಡಿದ್ದೂ, ತಮ್ಮ ಭಾಷಣದಲ್ಲಿ, ಲಿಂಗಾಯತ ಪ್ರತ್ಯೆಕ ಧರ್ಮದ ಜೊತೆ ನಾನು ಹೋಗೊವಾಗ ಹೊಗಬೇಡ ಅಂತ ಬಹಳ ಜನ ಸಲಹೆ ಕೊಟ್ಟರು, ಆದರೆ ನಾನು ಹಿಂದೆ ಸರಿದಿಲ್ಲಾ, 12ನೇ ಶತಮಾನದಲ್ಲಿ ನಮ್ಮ ಕ್ರಾಂತಿ ಶುರುವಾಗಿದೆ, ಈ ವೇದಿಕೆ ಮುಖಾಂತರ ಕೆಲವು ಸ್ವಾಮಿಗಳು, ಮತ್ತು ರಾಜಕಾರಣಿಗಳಿಗ ನೇರವಾಗಿ ಎಚ್ಚರಿಕೆ ಕೊಡೋಣ, 25ಲಕ್ಷ ಜನ ಬೆಂಗಳೂರ ಚಲೋ ಮಾಡೋಣ, ಮುಂದಿಟ್ಟು ಇಟ್ಟ ಹೆಜ್ಜೆ ಹಿಂದೆ ಇಡೋದು ಬೇಡ,  ನಾವೆಲ್ಲಾ ಒಂದಾದ್ರೆ ಯಾರು ನಮಗೆ ಎನು ಮಾಡೋದು ಸಾದ್ಯವಿಲ್ಲಾ ಎಂದರು. ಕಿತ್ತೂರ ಚನ್ನಮ್ಮ ಹುಟ್ಟಿದ ನಾಡಿನಿಂದ ಪ್ರಾರಂಭ ಮಾಡಿದಿವಿ ಅಂದ್ರೆ ಜಯ ಆಗುತ್ತೆ, ಬೀದರ್ ನ ವರೆಗೂ ಲಿಂಗಾಯತ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ, ಈಡಿಗರು, ಮತ್ತು ಕುಡುವಕ್ಕಲಿಗರನ್ನು ಮರತು ಬಿಟ್ಟಿದ್ದೇವೆ ಕ್ಷಮಿಸಿ, ನಿಮ್ಮನ್ನೂ ಸೇರಿಸುತ್ತೇವೆ, ಹಳ್ಳಿ-ಹಳ್ಳಿಯಲ್ಲಿ ಬಸವ ಸೇನೆ ಪ್ರಾರಂಭ ಮಾಡ್ತಿವಿ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ