ನಮ್ಮ ಧರ್ಮದಲ್ಲಿ ಮೂಗು ತೂರಿಸೋದು ಬಿಡಿ !

Kannada News

22-08-2017

ಬೆಳಗಾವಿ: ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆಗೆ ಆಗ್ರಹಿಸಿ, ಬೆಳಗಾವಿಯಲ್ಲಿ ನಡೆಸಲಾದ ಬೃಹತ್ ರ್ಯಾಲಿಗೆ, ರಾಜ್ಯದ ವಿವಿಧ ಭಾಗದಿಂದ ಸಾಕಷ್ಟು ಜನರು ಆಗಮಿಸುದ್ದೂ, ರ್ಯಾಲಿಗೆ ಆಗಮಿಸುತ್ತಿರುವ ವಾಹನಗಳಿಗೆ ಟೋಲ್ ಫ್ರೀ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ‌ತಾಲ್ಲೂಕಿನ ಹಿರೇಬಾಗೇವಾಡಿ ಟೋಲ್, ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಟೋಲ್ ನಲ್ಲಿ ಫ್ರೀ ಎಂಟ್ರಿಗೆ ವ್ಯವಸ್ಥೆ ಮಾಡಲಾಗಿತ್ತು. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆಗೆ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಲಾಗಿದ್ದೂ, ರಾಜ್ಯದ 50 ಕ್ಕೂ ಹೆಚ್ಚು ಸ್ವಾಮಿಗಳು ಸಮಾವೇಶದಲ್ಲಿ ಬಾಗಿಯಾಗಿದ್ದರು. ರಾಜಕೀಯ ಮುಖಂಡರಾದ ವಿನಯ ಕುಲಕರ್ಣಿ, ಪ್ರಕಾಶ ಹುಕ್ಕೇರಿ,  ಸಹ ಉಪಸ್ಥಿತರಿದ್ದರು.

ಇನ್ನು ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ವಿರಶೈವ ಮತ್ತು ಲಿಂಗಾಯತ ಬೇರೆ ಬೇರೆ, ಬಸವತತ್ವಗಳನ್ನು ಅಳವಡಿಸಿಕೊಂಡು ಬಂದು ನಾವೆಲ್ಲಾ ಬದುಕಬೇಕು, ಬಸವ ಧರ್ಮವನ್ನು ಡಿಕ್ಲೇರ ಮಾಡಿದ್ರೆ ಸರಿ, ಇಲ್ಲದೆ ಹೊದ್ರೆ ನಿಮ್ಮ ಪರಸ್ಥಿತಿ‌ ಗಂಭಿರ ಆಗುತ್ತೆ ಅಂತ ಎಚ್ಚರಿಕೆ ನೀಡಿದರು. ಕರ್ನಾಟಕದ ಯುವಕ ಯುವತಿಯರು ನನ್ನ ಕಣ್ಣು ತೆರಸಿದ್ದಾರೆ, ನಮಗೆ ಶೈಕ್ಷಣಿಕವಾಗಿ ಈ ಜಾತಿಯಲ್ಲಿ ಹುಟ್ಟಿದಕ್ಕೆ ಹಿಂದೆ ಉಳದಿದ್ದೇವೆ ಎಂದು ವಿದ್ಯಾರ್ಥಿ ತಮ್ಮ ಅಳಲು ತೋಡಿಕೊಂಡಿರುವದನ್ನು ಕೇಳಿದ್ದೇನೆ. ಮಹಾಸಭೆ ಅವರು ಎರಡು ಒಂದೆ ಅಂತಾ ಹೆಳುತ್ತಾರೆ, ಇನ್ನು ಮುಂದೆ ಹಾಗೆ ಹೇಳೋದು ಬಿಡಿ.  ನಮ್ಮನ್ನ ಸ್ವತಂತ್ರವಾಗಿ ಇರೋಕೆ ಬಿಡಿ. ನಮ್ಮ ಧರ್ಮದಲ್ಲಿ ಬಂದು ಮೂಗು ತೂರಿಸೋದು ಬಿಡಿ ಎಂದರು. ಲಿಂಗಾಯತ ಧರ್ಮ ಸ್ವತಂತ್ರವಾಗಬೇಕು, ಪ್ರತಿಯೋಬ್ಬರು ಈ ಧರ್ಮವನ್ನು ಸ್ವತಂತ್ರ ಧರ್ಮ ಮಾಡೋವರೆಗೂ ಶ್ರಮೀಶೋಣ, ಇದು ಒಂದು ಐತಿಹಾಸಿಕ ಸಮಾವೇಶ ಎಂದು ಬಣ್ಣಿಸಿದ್ದಾರೆ. ಲಿಂಗಾಯತ ಧರ್ಮ ಸ್ವಾತಂತ್ರ್ಯ ಧರ್ಮ ಮಾಡಬೇಕು ಇಲ್ಲದೆ ಹೊದಲ್ಲೆ ಇಂತಹ ಹೋರಾಟಗಳು ಸಾವಿರಾರು ನಡೆಯುತ್ತವೆ, ಈ ವೇದಿಕೆ ಮುಖಾಂತರ ಹೇಳೊದು ಎನು ಅಂದ್ರೆ ಹರಿಬ್ರಹ್ಮ ಬಂದರು ನಮ್ಮಲ್ಲಿ ಬದಲಾವಣೆ ಸಾಧ್ಯ ಇಲ್ಲಾ, ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ