ಬ್ಯಾಂಕ್ ಮುಷ್ಕರ: ವಹಿವಾಟು ಸ್ಥಗಿತ !

Kannada News

22-08-2017

ಮೈಸೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬ್ಯಾಂಕ್ ನೌಕರರ ಒಕ್ಕೂಟ ಕರೆನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮೈಸೂರಿನಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮೈಸೂರು ಜಿಲ್ಲೆಯಾದ್ಯಂತ ಬ್ಯಾಂಕಿಂಗ್ ವಹಿವಾಟು ಸ್ಥಗಿತಗೊಂಡಿದೆ. ಬಹುತೇಕ ಬ್ಯಾಂಕುಗಳು ಇಂದು ಬಂದ್ ಮಾಡಲಾಗಿದ್ದೂ, ಮುಷ್ಕರವೂ ವಾಣಿಜ್ಯ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ.  ಬ್ಯಾಂಕ್ ಅಧಿಕಾರಿಗಳ ಸಂಘಟನೆ, ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ, ರಾಷ್ಟ್ರೀಯ ಬ್ಯಾಂಕ್ ಸಿಬ್ಬಂದಿ ಸಂಘ ಸೇರಿದಂತೆ ಒಂಬತ್ತು ಸಂಘಟನೆಗಳ ಒಕ್ಕೂಟವಾದ ಸರ್ಕಾರಿ ಬ್ಯಾಂಕುಗಳ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ( ಯುಎಫ್ ಬಿಯು) ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗವಹಿಸಿದ್ದು, ಬ್ಯಾಂಕುಗಳ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿದೆ. ಬ್ಯಾಂಕುಗಳ ವಿಲೀನ ಪ್ರಸ್ತಾಪ ಕೈಬಿಡಬೇಕು, ಕಾರ್ಪೊರೇಟ್ ಸಾಲಮನ್ನಾ ಮಾಡಬಾರದು, ಉದ್ದೇಶ ಪೂರ್ವಕವಾಗಿ ಸುಸ್ತಿದಾರರಾಗುವವರನ್ನು ಕ್ರಿಮಿನಲ್ ಅಪರಾಧಿಗಳೆಂದು ಘೋಷಿಸಬೇಕು, NPA ವಸೂಲಿಗೆ ಸಂಸದೀಯ ಮಂಡಳಿ ನೀಡಿದ ಶಿಫಾರಸ್ಸು ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.                       

ಇನ್ನು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿ ಆವರಣದಲ್ಲಿ ಸೇರಿದ, ರಾಷ್ಟ್ರೀಕೃತ ಬ್ಯಾಂಕ್ ಗಳ ಸಾವಿರಾರು ಮಂದಿ ಉದ್ಯೋಗಿಗಳು ಬ್ಯಾಂಕುಗಳ ಖಾಸಗೀಕರಣ, ವಿಲೀನದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.                        

ಅಷ್ಟೇ ಅಲ್ಲದೇ ಧಾರವಾಡದಲ್ಲಿ, ರಾಷ್ಟ್ರೀಕೃತ ಬ್ಯಾಂಕಗಳ ವಿಲೀನ ಮತ್ತು ಖಾಸಗಿಕರಣಕ್ಕೆ ವಿರೋಧ ವ್ಯಕ್ತಪಡಿಸಿ, ಧಾರವಾಡದ ಎಸ್.ಬಿ.ಮುಖ್ಯ ಕಚೇರಿ ಎದರು ರಾಷ್ಟ್ರೀಕೃತ ಬ್ಯಾಂಕಗಳ ಸಿಬ್ಬಂದಿ ಪ್ರತಿಭಟನೆ ನಡೆಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ