‘ಡಿ’ ದರ್ಜೆ ನೌಕರನಿಂದ ವಸೂಲಿ ದಂಧೆ..!

Kannada News

22-08-2017

ಮೈಸೂರು: ರಾಜ್ಯದ ಪ್ರತಿಷ್ಠಿತ ಮೈಸೂರು ಮಹಾನಗರಪಾಲಿಕೆಯಲ್ಲಿ ಲಂಚಾವತಾರ ತಾಂಡವಾವಾಡುತ್ತಿರುವುದು ಬೆಳಕಿಗೆ ಬಂದಿದೆ.  ಪಾಲಿಕೆಯ ‘ಡಿ’ ದರ್ಜೆಯ ನೌಕರ ವಸೂಲಿ ದಂಧೆ ನಡೆಸುತ್ತಿರುವುದು ಬಯಲಾಗಿದೆ. ಪಾಲಿಕೆಯಲ್ಲಿ ಕ್ಲರ್ಕ್ ಆಗಿರುವ ಶಿವಕುಮಾರ್ ಎಂಬಾತನು, ಸಾಲ ಕೊಡಿಸುವುದಾಗಿ ಹೇಳಿ ಸಾರ್ವಜನಿರಿಂದ ಲಂಚದ ರೂಪದಲ್ಲಿ ಹಣ ಪಡೆದು  ವಂಚಿಸುತ್ತಿದ್ದಾನೆ. ಮೂಲ ಹುದ್ದೆಯಲ್ಲಿ ಮಾಲಿ ಎಂದು ಉಲ್ಲೇಖವಾಗಿದ್ದರೂ ಕ್ಲರ್ಕ್ ಎಂದು ಹೇಳಿಕೊಂಡು ಅಮಾಯಕ ಸಾರ್ವಜನಿಕರಿಗೆ ವಂಚಿಸುತ್ತಿದ್ದಾನೆ. ಪ್ರಧಾನಮಂತ್ರಿ ರೋಜ್‌ಗಾರ್‌ ಯೋಜನೆಯಡಿಯಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಲಂಚ ಪಡೆಯುತ್ತಿರುವ, ಶಿವಕುಮಾರ್ ನ ಲಂಚಾವತಾರ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಂ.ತೇಜಸ್‌ಕುಮಾರ್ ಎಂಬುವರಿಂದ 10 ಸಾವಿರ ಲಂಚ ಕೇಳಿ 3 ಸಾವಿರ ಹಣ ಪಡೆದಿದ್ದೂ,  15 ದಿನದಲ್ಲಿ ಸಾಲ ಕೊಡಿಸುವ ಭರವಸೆ ನೀಡಿ ಹಣ ಪಡೆದಿರುವುದಾಗಿ ತಿಳಿದು ಬಂದಿದೆ. ಪ್ರಶಾಂತ್ ಎಂಬ ಮಧ್ಯವರ್ತಿಯನ್ನು ಬಳಸಿಕೊಂಡು ಶಿವಕುಮಾರ್ ಲಂಚ ವಸೂಲಿ ದಂಧೆ ನಡೆಸುತ್ತಿದ್ದಾನೆ. ಪ್ರಶಾಂತ್ ಪಾಲಿಕೆ ನೌಕರನಲ್ಲದಿದ್ದರೂ ಪಾಲಿಕೆಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದಾನೆ. ಸಾಲ ಕೇಳಿ ಬರುವವರಿಗೆ ಪುಸಲಾಯಿಸಿ ಪ್ರಶಾಂತ್ ಮತ್ತು ಶಿವಕುಮಾರ್ ಲಂಚ ಪಡೆಯುತ್ತಿದ್ದರು. ಸಾರ್ವಜನಿಕರಿಗೆ ತಾವು ವಂಚನೆಗೊಳಗಾಗಿರುವುದು ತಿಳಿಯುತ್ತಿದ್ದಂತೆ, ಇತ್ತ ಹಣ ಸಾಲವು ದೊರೆಯದೇ, ಇರುವ ಹಣವನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ. ಈ ಕುರಿತು ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದೂ, ಶಿವಕುಮಾರ್‌ ನನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ