ವರದಕ್ಷಿಣೆಗಾಗಿ ಪತ್ನಿಯ ಕೊಲೆ !

Kannada News

21-08-2017

ಬೆಂಗಳೂರು: ವರದಕ್ಷಿಣೆಗಾಗಿ ಪತ್ನಿಯನ್ನೇ ಪತಿ ಕತ್ತು ಹಿಸುಕಿ ಕೊಲೆ ಮಾಡಿರುವ ದಾರುಣ ಘಟನೆ ಯಶವಂತಪುರದ, ತ್ರಿವೇಣಿ ನಗರದಲ್ಲಿ ನಡೆದಿದೆ. ತ್ರಿವೇಣಿ ನಗರದ  ಚಂದ್ರಿಕಾ(23)ಕೊಲೆಯಾದವರು. ಕಳೆದ ಒಂದೂವರೆ ವರ್ಷದ ಹಿಂದೆ ಹೆಬ್ಬಾಳದ ನಿವಾಸಿಗಳಾದ ಸುನಂದ ಮತ್ತು ಶಂಕರ್ ದಂಪತಿಯ ಮಗಳು ಚಂದ್ರಿಕಾ ಎಂಬಾಕೆಯನ್ನು ರಾಜೇಶ್ ಎಂಬಾತನ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.

ಮದುವೆ ಆದಾಗಿನಿಂದಲೂ ರಾಜೇಶ್ ವರದಕ್ಷಿಣೆ ತರುವಂತೆ ಪತ್ನಿಗೆ ನಿತ್ಯವೂ ಕಿರುಕುಳ ಹಾಗೂ ಚಿತ್ರ ಹಿಂಸೆ ನೀಡುತ್ತಿದ್ದನು. ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವಿನ ಜಗಳ ತಾರಕಕ್ಕೇರಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು, ಚಂದ್ರಿಕಾ ಪೋಷಕರು ಆರೋಪಿಸುತ್ತಿದ್ದಾರೆ. ಚಂದ್ರಿಕಾರ ಮೃತದೇಹ ಖಾಸಗಿ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿದೆ. ಮೃತ ಚಂದ್ರಿಕಾಗೆ ಒಂದು ವರ್ಷದ ಗಂಡು ಮಗು ಇದೆ. ಗಂಡು ಮಗುವನ್ನು ಲೆಕ್ಕಿಸದೇ ಗಂಡ, ಅತ್ತೆ, ಮಾವ ಸೇರಿ ಕೊಲೆ ಮಾಡಿದ್ದಾರೆಂದು ಪೋಷಕರ ಆರೋಪಿಸುತ್ತಿದ್ದಾರೆ. ಅಲ್ಲದೇ 25 ಲಕ್ಷ ವರದಕ್ಷಿಣೆ ತರುವಂತೆ ಪತಿ ರಾಜೇಶ್ ಕಿರುಕುಳ ನೀಡ್ತಾ ಇದ್ದ ಅಂತ ಪೋಷಕರು ದೂರಿದ್ದಾರೆ. ಯಶವಂತಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ