ಮಾರಕಾಸ್ತ್ರಗಳಿಂದ ಬೆದರಿಸಿ ಚಿನ್ನಾಭರಣ ಲೂಟಿ !

Kannada News

21-08-2017

ಬೆಂಗಳೂರು: ಹನುಮಂತನಗರದ ಪೈಪ್‍ ಲೇನ್ ರಸ್ತೆಯಲ್ಲಿ, ನಿನ್ನೆ ರಾತ್ರಿ ಸ್ನೇಹಿತನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪಾರ್ಟಿ ಮಾಡಿಕೊಂಡು ಕುಳಿತಿದ್ದ 8 ಮಂದಿಯನ್ನು ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಸಿ 28 ಸಾವಿರ ನಗದು, ಚಿನ್ನಾಭರಣ, ಮೊಬೈಲ್ ಗಳನ್ನು ಆರು ಮಂದಿ ದುಷ್ಕರ್ಮಿಗಳು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಕಾರು ಚಾಲಕ ಮುರಳಿ ಹನುಮಂತನಗರದ ಪೈಪ್ ಲೈನ್ ರಸ್ತೆಯ ಮನೆಯ ಮೇಲೆ ಸ್ನೇಹಿತನೊಬ್ಬನ ಹುಟ್ಟುಹಬ್ಬವನ್ನು 8 ಮಂದಿ ಗೆಳೆಯರ ಜೊತೆ ಸೇರಿ ರಾತ್ರಿ 10.30ರ ವೇಳೆ ಆಚರಿಸಿ, ಪಾರ್ಟಿ ಮಾಡುತ್ತ ಕುಳಿತಿದ್ದರು. ಈ ವೇಳೆ ಏಕಾಏಕಿ ಬಂದ 6 ಮಂದಿ ದರೋಡೆಕೋರರು ಮಚ್ಚು, ಲಾಂಗ್, ಇನ್ನಿತರ ಮಾರಕಾಸ್ತ್ರಗಳನ್ನು ತೋರಿಸಿ, ಬೆದರಿಸಿ ಅವರ ಬಳಿಯಿದ್ದ 28 ಸಾವಿರ ನಗದು, ಮೂರು ಮೊಬೈಲ್, ಚಿನ್ನದ ಉಂಗುರ, ಚಿನ್ನದ ಸರ ಸೇರಿ 60 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಈ ಸಂಬಂಧ ಮುರಳಿ ಅವರು, ನೀಡಿರುವ ದೂರು ದಾಖಲಿಸಿರುವ ಹನುಮಂತನಗರ ಪೊಲೀಸರು ತನಿಖೆ ಕೈಗೊಂಡು ದರೋಡೆಕೋರರ ಸುಳಿವು ಪತ್ತೆ ಹಚ್ಚಿ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ