1 ಕೋಟಿ ನಿಷೇಧಿತ ನೋಟುಗಳು ವಶ !

Kannada News

21-08-2017

ಬೆಂಗಳೂರು: ಅಮಾನ್ಯಗೊಂಡಿರುವ 500 ಹಾಗೂ 1000 ರೂಗಳ ಹಳೆ ನೋಟುಗಳನ್ನು ಬದಲಾಯಿಸಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಸುಬ್ರಹ್ಮಣ್ಯನಗರ ಪೊಲೀಸರು, ಒಂದು ಕೋಟಿ ರೂ. ನಿಷೇಧಿತ ಹಳೆ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ದೊಡ್ಡ ಬಾಣಸವಾಡಿ ನಿವಾಸಿ ಪ್ರಭಾಕರನ್ (40) ಬಂಧಿತ ಆರೋಪಿಯಾಗಿದ್ದಾನೆ. ಈತ ಗಾಯತ್ರಿನಗರ ಒಂದನೇ ಮುಖ್ಯರಸ್ತೆಯ ಬಳಿ ನಿಷೇಧಿತ 500 ಮತ್ತು 1000 ಮುಖಬೆಲೆಯ ಹಳೆ ನೋಟುಗಳನ್ನು ಬದಲಾವಣೆಗಾಗಿ ತರುತ್ತಿದ್ದಾನೆ ಎಂಬ ಬಗ್ಗೆ ಮಾಹಿತಿ ಪಡದ ಪೊಲೀಸರು,  ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.

ಆರೋಪಿ ವಿರುದ್ಧ ಐಪಿಸಿ, ಹಾಗೂ ಬ್ಯಾಂಕ್ ನೋಟು ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈತನಿಂದ ಒಂದು ಕೋಟಿ ರೂ.ಗಳ ಹಳೆ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಲ್ಲೇಶ್ವರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎ.ಆರ್.ಬಡಿಗೇರ ಅವರ ನೇತೃತ್ವದಲ್ಲಿ ಸುಬ್ರಹ್ಮಣ್ಯನಗರ ಪೊಲೀಸ್ ಇನ್ಸ್ ಪೆಕ್ಟರ್ ಎ.ವಿ.ವೆಂಕಟೇಶ್ ಮೂರ್ತಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ