ದೆವ್ವ, ಭೂತ ಮತ್ತು ಟಿ.ಆರ್‌.ಪಿ...!

Kannada News

21-08-2017

ದೆವ್ವ ಭೂತಗಳ ಆರ್ಭಟ ಕನ್ನಡ ಟಿವಿ ಚಾನಲ್ ಗಳಲ್ಲಿ ಹೆಚ್ಚಾಗುತ್ತಿದ್ದಂತೆಯೇ ನಾವೇನು ಕಡಿಮೆ ಎನ್ನುವಂತೆ ಕನ್ನಡದ ಹಿರಿಯ ಚಾನಲ್ ಉದಯ ಟಿವಿ ಕೂಡ ತಮಿಳಿನ ನಂದಿನಿ ಧಾರಾವಾಹಿಯನ್ನು ಉದಯಕ್ಕೆ ತಂದುಬಿಟ್ಟಿತು. ಸಿನೆಮಾದ ಮಾದರಿಯಲ್ಲಿ ತಯಾರಾಗಿದೆ ಎಂದು ಹೇಳಿಕೊಂಡು ಪ್ರೇಕ್ಷಕರನ್ನು ಆಕರ್ಷಿಸಲು ಹೋರಾಟ ನಂದಿನಿ ಬಹಳಷ್ಟು ದಿನಗಳ ಕಾಲ ಮೂರ್ನಾಲ್ಕು ಟಿ.ಆರ್‌.ಪಿ ಪಾಯಿಂಟ್ ಗಳ  ಆಸುಪಾಸಲ್ಲೇ ವೀಕ್ಷಕರನ್ನು ಸಂಪಾದಿಸಿ ಸಾಧಾರಣ ಸೀರಿಯಲ್ ಎನಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಉದಯದ ಇತರ ಸೀರಿಯಲ್ ಗಳೂ ಕೂಡ ಒಂದೋ ಎರಡೋ ಪಾಯಿಂಟ್ ಗಳಿಗೆ ತೃಪ್ತಿ ಪಡಬೇಕಾಗಿತ್ತು. ಆದರೆ ಈಗ ನಂದಿನಿಗೆ ಶುಕ್ರದೆಸೆ ಆರಂಭವಾದಂತಿದೆ. ಕಳೆದ ವಾರ ನಂದಿನಿ ಒಂಬತ್ತು ಪಾಯಿಂಟ್ ನಷ್ಟು ಟಿ.ಆರ್‌.ಪಿ ಗಳಿಸಿ ಅನೇಕರನ್ನು ಬೆರಗಾಗಿಸಿದೆ. ಚೆನ್ನಾಗಿದ್ದರೂ ಅದ್ಭುತವೆಂದು ಕರೆಯಲಾಗದ ಈ ನಂದಿನಿ ಸೀರಿಯಲ್ ಹೇಗೆ ಇಷ್ಟೊಂದು ಜನಪ್ರಿಯವಾಗುತ್ತಿದೆ ಎಂದು ಯೋಚಿಸಿದರೆ, ಅದಕ್ಕೆ ದೆವ್ವ ಭೂತಗಳು ಖಂಡಿತ ಕಾರಣವಲ್ಲ ಎಂದು, ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ, ಇನ್ಯಾರದ್ದಾದರೂ ಕೈವಾಡವಿರಬಹುದಾ ಎಂಬುದನ್ನು ತಳ್ಳಿಹಾಕುವಂತಿಲ್ಲ ಎಂದು ಟಿವಿ ಮಾಧ್ಯಮ ತಜ್ಞರು ಅನುಮಾನಿಸುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ದೆವ್ವ, ಭೂತ ಮತ್ತು ಟಿ.ಆರ್‌.ಪಿ...!


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ