ದಕ್ಷಿಣ ರಾಜ್ಯಗಳಿಗೆ ಹೆಚ್ಚು ಪ್ರಾತಿನಿಧ್ಯ..?

Kannada News

21-08-2017

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಜೆಡಿಯುನಿಂದ ಇಬ್ಬರು ಸಂಸದರ ಸೇರ್ಪಡೆ ಸಾಧ್ಯತೆಯಿದೆ. ಬಿಹಾರ್ ಸಿಎಂ ಆಪ್ತ ರಾಮಚಂದ್ರ ಸಿಂಗ್ ಮತ್ತು ಮಾಜಿ ಸಿಎಂ ಕರ್ಪೂರಿ ಠಾಕೂರ್ ಮಗ ರಾಮನಾಥ್ ಠಾಕೂರ್ ಅವರಿಗೆ ಸಚಿವ ಭಾಗ್ಯ ದೊರಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ದಕ್ಷಿಣ ಭಾರತಕ್ಕೆ ಪ್ರಾತಿನಿಧ್ಯ ನೀಡಲಿದ್ದಾರೆ. ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಇಬ್ಬರಿಗೆ ಕ್ಯಾಬಿನೆಟ್ ಹಾಗೂ ರಾಜ್ಯ ಸಚಿವ ಪಟ್ಟ ನೀಡಲಾಗುವುದು ಎಂದೂ, ಕೇಂದ್ರ ಸಚಿವ ಸಂಪುಟದಲ್ಲಿರುವ ಸ್ಮತಿ ಇರಾನಿ, ಅರುಣ್ ಜೇಟ್ಲಿ, ನರೇಂದ್ರ ಸಿಂಗ್ ತೋಮರ್, ಅನಂತ್ ಕುಮಾರ್ ಹಾಗೂ ರವಿಶಂಕರ್ ಪ್ರಸಾದ್ ಅವರಿಗೆ ನೀಡಿರುವ ಹೆಚ್ಚುವರಿ ಹೊಣೆಗಾರಿಕೆಯನ್ನು ಹೊಸಬರಿಗೆ ಹಂಚುವ ಸಾಧ್ಯತೆ ನಿಚ್ಚಳವಾಗಿದೆ.

ಕರ್ನಾಟಕದಲ್ಲಿ ಆಡಳಿತಕ್ಕೆ ಬರಲು ಹಾಗೂ ತಮಿಳುನಾಡಿನಲ್ಲಿ ಪಕ್ಷ ಗಟ್ಟಿಯಾಗಿ ತಳವೂರುವ ನಿಟ್ಟಿನಲ್ಲಿ ಸಚಿವ ಸಂಪುಟಕ್ಕೆ ದಕ್ಷಿಣ ರಾಜ್ಯಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಲು ಚಿಂತಿಸಲಾಗಿದೆ. ಕರ್ನಾಟಕದಿಂದ ಶೋಭಾ ಕರಂದ್ಲಾಜೆ, ಸುರೇಶ್ ಅಂಗಡಿ ಮುಂತಾದವರ ಹೆಸರು ಮುಂಚೂಣಿಯಲ್ಲಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ