ಗುಂಡಿನ ದಾಳಿ: ಪಾರಾದ ಅರಣ್ಯ ಸಿಬ್ಬಂದಿ !

Kannada News

21-08-2017

ಕಾರವಾರ: ಅರಣ್ಯ ಇಲಾಖೆ ವಾಹನದ ಮೇಲೆ ದುಷ್ಕರ್ಮಿಗಳು, ಗುಂಡಿನ ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಅಂಕೋಲಾ ತಾಲ್ಲೂಕಿನ ಸುಂಕಸಾಳ ಗ್ರಾಮದ ಬಳಿ ದುಷ್ಕರ್ಮಿಗಳು, ದಾಳಿ ನಡೆಸಿದ್ದಾರೆ. ಘಟನೆಯು ಮಧ್ಯರಾತ್ರಿ 1 ಗಂಟೆ ಸುಮಾರಿನಲ್ಲಿ ನಡೆದಿದೆ. ದಾಳಿಯಲ್ಲಿ ಇಲಾಖಾ ವಾಹನಕ್ಕೆ ಗುಂಡು ತಗುಲಿರುವುದರಿಂದ ವಾಹನಕ್ಕೆ ಸಾಕಷ್ಟು ಹಾನಿಯಾಗಿದೆ. ಅದೃಷ್ಟ ವಶಾತ್ ವಾಹನದಲ್ಲಿ ಇರುವವರು ಅಪಾಯದಿಂದ ಪಾರಾಗಿದ್ದಾರೆ. ವಾಹನದಲ್ಲಿ ಮಾಸ್ತಿಕಟ್ಟ ಅರಣ್ಯ ವಲಯದ ಹಜರತ್ ಪಾಶ, ಕಿರಣ್ ಹಾಗೂ ರಾಜಪ್ಪ ಎನ್ನುವ ಸಿಬ್ಬಂದಿಗಳಿದ್ದರು, ಎಲ್ಲರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದೂ, ಅಂಕೋಲಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ