ಒಂದು ಕಾಲದಲ್ಲಿ ನನ್ನನ್ನು ಏಕಾಂಗಿ‌ ಮಾಡಿದ್ರು...?

Kannada News

21-08-2017 640

ಬಾಗಲಕೋಟೆ: ಬಾಗಲಕೋಟೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಪ್ರತಿ ದಿನ ಒದೊಂದು ಜಿಲ್ಲೆ ಪ್ರವಾಸ ಮಾಡುತ್ತಿದ್ದೇನೆ. ಬಾಗಲಕೋಟಲ್ಲೂ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು, ಮುಂದಿನ ಮಾರ್ಚ್‌- ಏಪ್ರೀಲ್ ನಲ್ಲಿ ಚುನಾವಣೆ ನಡೆಯಬಹುದು, ಆರು ತಂಡಗಳನ್ನು ಮಾಡಿ ಪಕ್ಷ ಸಂಘಟನೆಗೆ ಪ್ರವಾಸ ಮಾಡಲಾಗುತ್ತದೆ, ಒಂದೊಂದು ತಂಡಕ್ಕೆ ಐದು ಜಿಲ್ಲೆಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಪ್ರತಿ ಜಿಲ್ಲೆಗೆ ವೀಕ್ಷಕರನ್ನು ನೇಮಕ ಮಾಡಲಾಗುವುದು, ನಮ್ಮ ಪಕ್ಷದ ಬಳಿ ದುಡ್ಡಿಲ್ಲ. ನಾವು ಮನೆ ಮನೆ ತೆರಳಿ ಪ್ರಚಾರ ಮಾಡ್ತೇವೆ, ಕುಮಾರಸ್ವಾಮಿ ನಾಯಕತ್ವದಲ್ಲಿ ಚುನಾವಣೆ ಎದುರಿಸೋಕೆ, ಸಿದ್ದರಿದ್ದೇವೆ ಎಂದರು.

ಪಕ್ಷ ಸಂಘಟನೆ ಹಿನ್ನಲೆ ಬಾಗಲಕೋಟೆಗೆ ಆಗಮಿಸಿದ್ದೇನೆ, ರಾಜ್ಯ ಮಟ್ಟದಲ್ಲಿ 6 ತಂಡಗಳನ್ನ ನೇಮಕ ಮಾಡಲಾಗಿದೆ. ಪ್ರತಿ ಜಿಲ್ಲೆಗೂ ತೆರಳಿ, ಸ್ಥಳಿಯವಾಗಿ ಪಕ್ಷದ ಬಗ್ಗೆ ಸರ್ವೆ ನಡೆಸಲಾಗುತ್ತೆ, 15 ದಿನಕ್ಕೊಂದು ಸಾರಿ ನಾನೆ ರಿವ್ಯೂವ್ ಮಾಡುತ್ತೇನೆ, ಮತ್ತೆ ಸೆಪ್ಟಂಬರ್ ಅಕ್ಟೋಬರ್ ನಲ್ಲಿ ಎರಡು ಸಾರಿ ಉತ್ತರ ಕರ್ನಾಟಕ ಪ್ರವಾಸ ಮಾಡ್ತಿನಿ ಎಂದು ತಿಳಿಸಿದರು.

ಒಂದು ಕಾಲದಲ್ಲಿ ನನ್ನನ್ನು ಏಕಾಂಗಿ‌ ಮಾಡಿದ್ರು, ಅವಾಗ್ಲೆ ನಾನು ಮುಖ್ಯಮಂತ್ರಿ ಆಗಿ ತೋರಿಸಿದ್ದೇನೆ, ಐ-ನೋ ಕರ್ನಾಟಕ ಪಾಲಿಟಿಕ್ಸ್ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಮೇ 10ರ ನಂತರ ಮತ್ತೆ ನಾನು ಇಲ್ಲಿಗೆ ಬರುತ್ತೇನೆ, ಆಗ ಎಲ್ಲವನ್ನು ವಿವರವಾಗಿ ಹೇಳುತ್ತೇನೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದೇವೇಗೌಡರು,  ದೆಹಲಿಗೆ ಹೋಗಿ ವಿಶೇಷ ಯೋಜನೆ ಜಾರಿಗೆ ತಂದೆ, ಕೃಷ್ಣಾ ನೀರಿಗಾಗಿ ತಾನು ಸಾಕಷ್ಟು ಹೋರಾಟ ಮಾಡಿದ್ದೇನೆ ಎಂದು ತಿಳಿಸಿದರು. ರಾಜ್ಯದಲ್ಲಿ ಪಕ್ಷದ‌ ಬೆಳವಣಿಗೆ, ಅಭ್ಯರ್ಥಿಗಳ ಬಗ್ಗೆ ಸಮಾಲೋಚಿಸಿಲು, ಸೂಚನೆ ನೀಡಲಾಗಿದೆ, ರಾಜ್ಯದ ಚುನಾವಣೆ ಡಿಸೆಂಬರ್ ಅಥವಾ ಎಪ್ರಿಲ್ ನಲ್ಲಿ ನಡೆಯುತ್ತೊ ಗೊತ್ತಿಲ್ಲ, ಪ್ರತಿ ಸಮಾಜದ ನಾಯಕನಿಗೆ  ಜೆಡಿಎಸ್‌ ನಲ್ಲಿ ವಿಶೇಷ ಸ್ಥಾನದ ಆದ್ಯತೆ ನೀಡಲಾಗುತ್ತೆ, ಯಾವಾಗಲಾದರೂ ಚುನಾವಣೆ ಬರಲಿ ನಾನು ಪಕ್ಷ ಬಲವರ್ಧನೆ ಕಾರ್ಯ ಶುರುಮಾಡಿದ್ದೇವೆ ಎಂದರು.

‘ಸಿ ಫೋರ್’ ಸಂಸ್ಥೆ ಪ್ರಕಾರ ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರುವ ವಿಚಾರದ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ದೇವೇಗೌಡರೇ ನೀವೇ ಮುಖ್ಯ ಮಂತ್ರಿ ಆಗ್ತೀರಾ ಓಕೆ.
  • ಇಬ್ರಾಹಿಂ ಪಣಂಬೂರ
  • ವೈದ್ಯ