ಪಾಕಿಸ್ತಾನದ ದರ್ಗಾಕ್ಕೆ ತೆರಳಿದ್ದ ಭಾರತದ ಇಬ್ಬರು ಸೂಫಿ ಗುರುಗಳು ನಾಪತ್ತೆ

Kannada News

17-03-2017

ದೆಹಲಿ ನಿಜಾಮುದ್ದೀನ್ ದರ್ಗಾದ ಆಸೀಫ್ ನಿಜಾಮ್, ನಾಜಿಮ್ ನಿಜಾಮ್ ನಾಪತ್ತೆಯಾದವರು. ಪಾಕಿಸ್ತಾನದ ಲಾಹೋರ್ ಮತ್ತು ಕರಾಚಿಯಲ್ಲಿರುವ ದರ್ಗಾ ಭೇಟಿಗೆ ತೆರಳಿದ್ದ ಸಂದರ್ಭದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.

ಇವರ ಬಗ್ಗೆ ಮಾಹಿತಿ ನೀಡಬೇಕೆಂದು ಭಾರತ, ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಸೂಫಿ ಗುರುಗಳು ನಾಪತ್ತೆಯಾಗಿರುವ ಬಗ್ಗೆ ಅವರ ಕುಟುಂಬದವರು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದು, ಅದರಂತೆ ಮಾಹಿತಿ ನೀಡಲು ಪಾಕ್ ಸರ್ಕಾರಕ್ಕೆ ಸೂಚಿಸಲಾಗಿದೆ.

ಲಾಹೋರ್ ನ ದಾತಾ ದರ್ಬಾರ್ ದರ್ಗಾ ಭೇಟಿಯ ಬಳಿಕ ಇಬ್ಬರೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಭಾರತ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.

Links :



ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲ



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ