ಚರಂಡಿಯಲ್ಲಿ ಬಿದ್ದು ಯುವಕ ಸಾವು !

Kannada News

21-08-2017

ಗದಗ: ದ್ವಿಚಕ್ರ ವಾಹನ ಸಮೇತ ಚರಂಡಿಯಲ್ಲಿ ಬಿದ್ದ ಯುವಕ, ಸಾವನ್ನಪ್ಪಿರುವ ದಾರುಣ ಘಟನೆಯು, ಗದಗ ನಲ್ಲಿ ಜರುಗಿದೆ. ಜಿಲ್ಲೆಯ ಕಳಾಪುರ ರಸ್ತೆಯ ಆದರ್ಶನಗರದಲ್ಲಿ ಘಟನೆ ಸಂಭವಿಸಿದೆ, ದೀಪಕ್ ಯಾದವ್ (34)ಮೃತ ದುದೈ೯ವಿ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದೂ, ವಿಷಯ ತಿಳಿದು, ಸ್ಥಳಕ್ಕೆ ನಗರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮದ್ಯದ ಅಮಲಿನಲ್ಲಿ ಬಿದ್ದು, ಸಾವನ್ನಪ್ಪಿರುವುದಾಗಿ, ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗದಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ