ಸಮೀಕ್ಷೆ ನಿಜವಾದರೆ ರಾಜಕೀಯ ಬಿಡುತ್ತೇನೆ..?

Kannada News

21-08-2017

ಬಾಗಲಕೋಟೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 120 ಸ್ಥಾನ ಗೆಲ್ಲುವ  ಗುರಿ ಇಟ್ಟುಕೊಂಡಿದ್ದೇವೆ, ಎಂದು ಜೆಡಿಎಸ್ ಹಿರಿಯ ಮುಖಂಡರಾಗಿರುವ, ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿಂದು ಮಾತನಾಡಿದ್ದೂ, ಬಂಡಾಯ ಶಾಸಕರು ಜೆಡಿಎಸ್ ತೊರೆದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರು ಪಕ್ಷ ಬಿಟ್ಟು ಹೋದರೆ ಪಕ್ಷಕ್ಕೆ ಏನು ನಷ್ಟವಿಲ್ಲ, ಇದರಿಂದ ಯಾವುದೇ ಪರಿಣಾಮ ಬೀರೋದಿಲ್ಲ ಎಂದಿದ್ದಾರೆ. ಪಕ್ಷ ತೊರೆದವರ ಬದಲಿಗೆ ಪರ್ಯಾಯ ಮುಖಂಡರು ಮತ್ತು ಟಿಕೆಟ್ ಸಿಗದ ಅತೃಪ್ತರು ಸಾಕಷ್ಟಿದ್ದಾರೆ, ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಕೊಡುತ್ತೇವೆ ಎಂದಿದ್ದಾರೆ. ಇನ್ನು ‘ಸಿ ಫೋರ್’ ಸಮೀಕ್ಷೆಯ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿಕಾರದಲ್ಲಿದ್ದೋರು ತಮ್ಮ ಪ್ರಭಾವದಿಂದ ಸಮೀಕ್ಷೆ ಮಾಡಿದ್ದಾರೆ, ಸಮೀಕ್ಷೆ ಹುಸಿಯಾಗುತ್ತದೆ, ಅದಕ್ಕೆ ಮಹತ್ವ ಕೊಡುವ ಅವಶ್ಯಕತೆಯಿಲ್ಲ, ಎಂದು ಭವಿಷ್ಯ ನುಡಿದಿದ್ದಾರೆ. ಅದಲ್ಲದೇ ಸಮೀಕ್ಷೆ ನಿಜವಾದರೆ ರಾಜಕೀಯ ಬಿಡುತ್ತೇನೆ ಎಂದು ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಏನೆ ತಿಪ್ಪರಲಾಗ ಹಾಕಿದರೂ ಅಧಿಕಾರಕ್ಕೆ ಬರೋದಿಲ್ಲ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು, ಸಿಎಂ ಹೇಳಿಕೆಗೆ ಹೊರಟ್ಟಿ ತಿರುಗೇಟು ನೀಡಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ