ಆತ ಕಳ್ಳತನಕ್ಕೆಂದೇ ಬೆಂಗಳೂರಿಗೆ ಬರುತ್ತಿದ್ದ..?

Kannada News

21-08-2017

ಬೆಂಗಳೂರು: ಮನೆ ಕಳ್ಳತನ ಮಾಡುತಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಡೆಂಕಣಿಕೋಟೆ ಮೂಲದ ಕುಮಾರ್ ಬಂಧಿತ ಅರೋಪಿ. ಕಳ್ಳತನ ಮಾಡಲೆಂದೇ ಬೆಂಗಳೂರಿಗೆ ಬರುತಿದ್ದ ಆಸಾಮಿ, ಬೀಗ ಹಾಕಿದ ಮನೆಗಳಿಗೆ ನುಗ್ಗಿ ಚಿನ್ನಾಭರಣ ದೋಚುತಿದ್ದ. ದೋಚಿದ ಚಿನ್ನದ ಜೊತೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕೂಡ ಕದಿಯುತ್ತಿದ್ದ. ಅಲ್ಲದೇ ಕದ್ದ ಬೈಕ್ ನಲ್ಲಿ ವಾಪಸ್ ಊರಿಗೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ.  ಈತ ಕದ್ದ ಚಿನ್ನಾಭರಣಗಳನ್ನು ಮಾರಿ ಮೋಜಿನ ಜೀವನ ನಡೆಸುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಬೊಮ್ಮನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕುಮಾರ್ ನನ್ನು ಬಂಧಿಸಿದ್ದಾರೆ. ಆರೋಪಿಯ ಬಂಧನದಿಂದ 11 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತನಿಂದ 140 ಗ್ರಾಂ. ಚಿನ್ನ, 4 ಬೈಕ್ ಸೇರಿದಂತೆ 7 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ ಮಾಡಲಾಗಿದ್ದೂ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ