ಸುಮ್ನೆ ಯಾಕ್ ಬೇಕಿತ್ತು ‘ಕಿರಿಕ್ ’...!

Kannada News

21-08-2017

ಕಿರಿಕ್ ಪಾರ್ಟಿ ಸಿನೆಮಾವನ್ನು ಮಹಾ ಸಿನೆಮಾವೆಂದು ಬಿಂಬಿಸಿ, ಅದರಿಂದ ಲಾಭ ಪಡೆಯಲು ಹೊರಟ ಕನ್ನಡ ಕಲರ್ಸ್ ವಾಹಿನಿ ಸಿನೆಮಾದ ಥಿಯೆಟರ್ ಗಳಿಕೆಯ ಆಧಾರದ ಮೇಲೆ ಟೀವಿಯಲ್ಲೂ ಅದನ್ನು ಎಲ್ಲರೂ ನೋಡುತ್ತಾರೆಂಬ ಆಶಯದೊಂದಿಗೆ ಆಗಸ್ಟ್ 19 ಮತ್ತು 20 ರಂದು ಪ್ರಸಾರ ಮಾಡಿತು. ಈ ಮೂಲಕ ಎರಡು ವಾರಗಳ ಟಿ.ಆರ್.ಪಿ ಯಲ್ಲೂ ಹೆಚ್ಚು ಪಾಯಿಂಟ್ ಗಳನ್ನೂ ಗಳಿಸುವ ಹುನ್ನಾರ ಇದಾಗಿತ್ತು. ಒಂದು ತಿಂಗಳ ಕಾಲ ಪ್ರೊಮೋ  ಹಾಕಿ ಪ್ರಚಾರ ನೀಡಲ್ಪಟ್ಟ ಸಿನೆಮಾ ಎಂಬ ಹೆಗ್ಗಳಿಕೆಗೂ ಪಾತ್ರವಾದ 'ಕಿರಿಕ್ ಪಾರ್ಟಿ', ಬಿಡುಗಡೆಯಾದಾಗ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಿಯವಾಗಿ ಅತ್ಯಂತ ಅಬ್ಬರದ ಪ್ರದರ್ಶನ ಕಂಡಿತ್ತು. ಆದರೆ ಟಿವಿ ಯಲ್ಲೂ ಅದೇ ರೀತಿಯ ಪ್ರೇಕ್ಷಕ ಬೆಂಬಲ ಈ ಸಿನೆಮಾಕ್ಕೆ  ಸಿಗುತ್ತದೆ ಎಂಬ ನಂಬಿಕೆಯೊಂದಿಗೆ ಕಲರ್ಸ್ ವಾಹಿನಿ ಎರಡು ದಿನ ಪ್ರಸಾರ ಮಾಡಿದೆ. ಕಾಲೇಜು ವಿದ್ಯಾರ್ಥಿಗಳಿಂದ ಬಂದ  ಪ್ರತಿಕ್ರಿಯೆ ಕುಟುಂಬಸ್ಥರಿಂದ ಬರಲಿಲ್ಲವೆಂದು ವಾಹಿನಿಗೆ ಟಿವಿ ಪ್ರಸಾರದ ನಂತರ ತಡವಾಗಿ ಗೊತ್ತಾಗಿದೆ. ಅನೇಕ ಮಂದಿ  ಚಿತ್ರದ ಮಧ್ಯದಲ್ಲಿ ಚಾನೆಲ್ ಬದಲಾಯಿಸಿದ್ದು ಚಾನಲ್ ಅರಿವಿಗೆ ಬಂದಿದೆ. ಅನೇಕ ಮಧ್ಯವಯಸ್ಕಕ ವೀಕ್ಷಕರಂತೂ ಕಿರಿಕ್ ಪಾರ್ಟಿ ಒಂದು ತಲೆಬುಡವಿಲ್ಲದ ಸಿನೆಮಾವೆಂದು ಹಲುಬಿದ್ದಾರೆ. ಬಹಳ ದೊಡ್ಡ ಮೊತ್ತಕ್ಕೆ ಖರೀದಿಸಿ ಅದಕ್ಕೆ ಸಮಾನಾದ ಪ್ರಚಾರ ಮಾಡಿದ ಮೇಲೆ ಆ ಸಿನೆಮಾ ಟಿವಿ ಪ್ರೇಕ್ಷಕರಿಗೆ ಇಷ್ಟವಾಗದಿದ್ದಾಗ, ಚಾನೆಲ್ ಯಾವ ರೀತಿ ಇದನ್ನು ಅರ್ಥೈಸಿಕೊಳ್ಳಬಹುದೆಂದು ಟಿವಿ ಲೋಕದ ತಜ್ಞರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಎಂಥಾ ದೊಡ್ಡ ಸಿನೆಮಾಕ್ಕೂ ಒಂದು ಮಿತಿಯಲ್ಲೇ ಹಣ ಕೊಡಬೇಕು ಮತ್ತು ಪ್ರಚಾರ ಮಾಡಬೇಕು ಎಂದು ಕನ್ನಡ ಟಿವಿ ಚಾನೆಲ್ ನವರೆಲ್ಲ ನಿರ್ಧರಿಸಿದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ